ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಊರಿನ ಪುರೋಹಿತರೊಬ್ಬರಿಗೆ ಮದುವೆ ಮಾಡಿಸುವುದಾಗಿ ಸುಮಾರು 6 ಲಕ್ಷ ರೂ ಪಡೆದು ಮೋಸ ವೆಸಗಿದ ಘಟನೆಗೆ ಸಂಬಂಧಿಸಿದಂತೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ ಈ ಪ್ರಕರಣದ ಸಮಗ್ರ ತನಿಖೆಗೆ ಆಘ್ರಹಿಸಿದೆ. ಇಷ್ಟೇ ಅಲ್ಲದೆಯೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಮಠ ಸ್ಪಷ್ಠೀಕರಣ ನೀಡಿದೆ.
ಏನಿದು ಪ್ರಕರಣ;
ಉತ್ತರ ಪ್ರದೇಶದಿಂದ ಯಲ್ಲಾಪುರದ ಕಳಚೆಯ ಪುರೋಹಿತರಿಗೆ ಕನ್ಯೆ ಕೊಡಿಸುವುದಾಗಿ ಮಾತನಾಡಿ, ವ್ಯವಹಾರವನ್ನೂ ಮುಗಿಸಿ ರಾಮಕೃಷ್ಣ ಭಟ್ ರವರಿಂದ 6 ಲಕ್ಷ ರೂ ಹಣವನ್ನೂ ಪಡೆದಿದ್ದರು. ಉತ್ತರ ಪ್ರದೇಶ ಗೋಪಾಲಪುರದ ಪೂಜಾ ಮಿಶ್ರಾ ಜೊತೆ ರಾಮಕೃಷ್ಣ ಭಟ್ ರವರ ಸಂಬಂಧ ಬೆಸೆಯುವ ಸಿದ್ದತೆಯನ್ನೂ ನಡೆಸಿದರು. ಲಕ್ಷ್ಮೀನಾರಾಯಣ ಭಟ್, ನಾಗರಾಜ ಭಟ್ ಹಾಗೂ ಮಾಲಾ ಜಿ ತ್ರಿಪಾಠಿ ಸೇರಿ ರಾಮಕೃಷ್ಣ ಭಟ್ ರವರನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ದು ಗೋಪಾಲಪುರದ ಪೂಜಾ ಮಿಶ್ರಾ ಅವಳೊಂದಿಗೆ ನಿಶ್ಚಿತಾರ್ಥ ಕಾರ್ಯವನ್ನೂ ಪೂರ್ಣಗೊಳಿಸಿದ್ದರು. ನಂತರ ಪೂಜಾ ಮಿಶ್ರಾ ಅವರು ರಾಮಕೃಷ್ಣ ಭಟ್ ರವರನ್ನು ಭೇಟಿಯಾಗಲು ಯಲ್ಲಾಪುರ ತಾಲೂಕಿನ ಕಳಚೆಗೆ ಬಂದಿದ್ದು ಅಗಸ್ಟ 17ರಂದು ಬೆಳಗ್ಗೆ ವಾಯುವಿಹಾರಕ್ಕೆ ಹೋಗೋಣ ಎಂದು ರಾಮಕೃಷ್ಣ ಭಟ್ ರವರನ್ನು ಕರೆದೊಯ್ದ ಪೂಜಾ ಮಿಶ್ರಾ ಅವರು ರಾಮಕೃಷ್ಣ ಭಟ್ ರವರನ್ನು ರಸ್ತೆ ಬದಿಗೆ ದೂಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ. ನಿಶ್ಚಿವಾದ ಮದುವೆಯನ್ನೂ ಮಾಡಿಸಲಿಲ್ಲ-ಮದುವೆ ಮಾಡಿಸುವುದಾಗಿ ಪಡೆದ 6 ಲಕ್ಷ ಹಣವನ್ನೂ ವಾಪಸ್ಸು ನೀಡಿಲ್ಲ ಎಂಬ ಕಾರಣಕ್ಕೆ ರಾಮಕೃಷ್ಣ ಅನಂತ ಭಟ್ ಕರಿಮನೆ ಕಳಚೆ ಇವರು ಯಲ್ಲಾಪುರ ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದರು,
ಸೋಂದಾ ಮಠದ ಸ್ಪಷ್ಠೀಕರಣ:
ಉತ್ತರಪ್ರದೇಶದ ಹೆಣ್ಣಿನೊಂದಿಗೆ ಮದುವೆ ಮಾಡಿಸುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ ಬಗ್ಗೆ ನಾಲ್ಕು ಜನರ ವಿರುದ್ಧ ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಆರೋಪಿತರಲ್ಲಿ ಒಬ್ಬರು ಶ್ರೀ ಸ್ವರ್ಣವಲ್ಲೀ ಮಠದ ಸಿಬ್ಬಂಧಿ ಎನ್ನುವ ವರದಿ ಬಹುಕೇಕ ಪತ್ರಿಕೆಗಳಲ್ಲಿ ವರದಿಯಾಗಿದೆ. ಈ ವರದಿಗಳನ್ನು ಗಮನಿಸಿರುವ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆಡಳಿತ ಮಂಡಳಿ ಈ ಘಟನೆಗೂ ಸ್ವರ್ಣವಲ್ಲೀ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಠಪಡಿಸಿದೆ.
ಈ ಪ್ರಕರಣಕ್ಕೂ ಸೋಂದಾ ಮಠಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ವರ್ಣವಲ್ಲೀ ಮಠ ಹೇಳಿದೆ. ದೂರಿನಲ್ಲಿ ಉಲ್ಲೇಖಿಸಲಾದ ವಿಷಯದ ಬಗ್ಗೆ ತ್ವರಿತ ಮತ್ತು ಸಂಪೂರ್ಣ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ವರ್ಣವಲ್ಲಿ ಮಠ ಪೋಲಿಸ್ ಅಧಿಕಾರಿಗಳನ್ನು ಒತ್ತಾಯಿಸಿದೆ. ಪೋಲಿಸರು ಈ ಘಟನೆಯ ಕುರಿತು ಸಮಗ್ರ ತನಿಖಾ ಕಾರ್ಯ ಕೈಗೊಳ್ಳಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಮುಂದೆ ಜನರು ಈ ರೀತಿಯ ಅಪರಾಧಿಗಳಲ್ಲಿ ತೊಡಗುವುದಕ್ಕೆ ಭಯವುಂಟಾಗಿ ಸಮಾಜದಲ್ಲಿ ಪ್ರಾಮಾಣಿಕತೆ ಆಚರಣೆಗೆ ಬರಲಿ ಎಂದು ಶ್ರೀಮಠ ಹೇಳಿದೆ. ಆರೋಪಿತರಲ್ಲಿ ಒಬ್ಬರು ಶ್ರೀಮಠದ ಸಿಬ್ಬಂಧಿ ಎಂದು ಮಾಧ್ಯಮಗಳಲ್ಲಿ ಸುದ್ಧಿ ಪ್ರಕಟವಾಗಿದೆ. ಆದರೆ ಈ ಪ್ರಕರಣಕ್ಕೂ ಶ್ರೀಮಠಕ್ಕೂ ಯಾವುದೇ ಸಬಂಧವಿಲ್ಲ ಎಂದು ಸೋಂದಾ ಮಠವು ಸ್ಪಷ್ಠೀಕರಣ ನೀಡಿದೆ.