ಸುದ್ಧಿಕನ್ನಡ ವಾರ್ತೆ
ಭಟ್ಕಳ: ನಗರದ ಮೂಡಭಟ್ಕಳದ ನಿವಾಸಿ ತಿಮ್ಮಪ್ಪಯ್ಯ ಭಟ್ಟ ಕೊರ್ಲಿಕಾನ್ (63) ಇವರು ಗುರುವಾರ ಮಧ್ಯಾಹ್ನ ಹೃದಯಾಘಾತದಿಂದ ಮೃತರಾದರು.
ಮೃತರು ಗುರುವಾರ ಮಧ್ಯಾಹ್ನ ನಗರದ ಮುಖ್ಯ ರಸ್ತೆಯಲ್ಲಿರುವ ವನದುರ್ಗಿ ದೇವಿ ಕ್ಷೇತ್ರ (ಬಂಡಿ ಬಕ್ಕ) ದಲ್ಲಿ ಹುಣ್ಣಿಮೆಯ ಪ್ರಯುಕ್ತ ಪೂಜೆ ಸಲ್ಲಿಸಿ ನಂತರ ತಮ್ಮ ಸೈಕಲ್ಲಿನಲ್ಲಿ ಮನೆಗೆ ಹೋಗುವಾಗ ಹಳೆ ಬಸ್ ನಿಲ್ದಾಣದ ಬಳಿಯಲ್ಲಿ ತೀವ್ರ ಏದೆ ನೋವು ಬಂದು ಕುಸಿದು ಬಿದ್ದ ಕಾರಣ ಸರಕಾರಿ ಆಸ್ಪತ್ರೆಗೆ ದಾಖಲಿಸುವಾಗ ಮೃತಪಟ್ಟಿದ್ದಾರೆ.
ಮೃತರು ಪತ್ನಿ, ಪುತ್ರ ಹಾಗೂ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರು ನಗರದ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ದಶಕಗಳಿಗೂ ಹೆಚ್ಚು ಕಾಲ ಅರ್ಚಕರಾಗಿ ಸೇವೆ ಸಲ್ಲಿಸಿದ್ದರು. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು ಹಾಗೂ ಗಾಣಿಗ ಸಮಾಜದ ಅಧ್ಯಕ್ಷ ಮತ್ತು ಮಣ್ಕುಳಿ ಹನುಮಂತ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸುಭಾಷ ಎಂ. ಶೆಟ್ಟಿ ಸೇರಿದಂತೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.
ರಾಜ್ಯದೆಲ್ಲೆಡೆ ಹೃದಯಾಘಾತದ ಸುದ್ದಿಯಿಂದ ಕಂಗೆಟ್ಟಿರುವ ಸಮಯದಲ್ಲಿಯೇ ಭಟ್ಕಳದಲ್ಲಿಯೂ ಹೃದಯಾಘಾತ ಸಂಭವಿಸಿರುವುದು ಜಿಲ್ಲೆಯ ಜನತೆಯನ್ನು ಚಿಂತೆಗೀಡು ಮಾಡಿದೆ.