ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ ಃಅತ್ತ ಬಿಜೆಪಿಯೂ ಅಲ್ಲ ಇತ್ತ ಕಾಂಗ್ರೆಸ್ಸು ಅಲ್ಲ ಅಂತಿರುವ ಶಾಸಕ ಶಿವರಾಮ ಹೆಬ್ವಾರ್ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬೆಂಗಳೂರಿನಲ್ಲಿ ಖುದ್ದು ಭೇಟಿ ಮಾಡಿದ್ದಾರೆ.ಹಲವು ಸುತ್ತು ಮಾತುಕಥೆಯಾಡಿದ್ದಾರೆ.ನಂತರ ಬಹಿರಂಗವಾಗಿಯೇ ಹಸ್ತಲಾಘವ ಕ್ಕೆ ಹೆಬ್ವಾರ್ ಪೋಟೋ ಪೋಸ್ ಕೊಟ್ಟಿದ್ದಾರೆ.ನಂತರ ಸಿದ್ದರಾಮಯ್ಯನವರು ಹೆಬ್ಬಾರ್ ರವರ ಹೆಗಲ ಮೇಲೆ ಕೈ ಹಾಕಿಕೊಂಡು ತಮ್ಮವರೊಂದಿಗೆ ಸಾಗಿದ ದೃಶ್ಯ ಕಂಡುಬಂದಿದೆ.ಕೆಲ ಹೊತ್ತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಹೆಬ್ಬಾರ್ ಏನೆಂಬುದನ್ನು ಬಹಿರಂಗಗೊಳಿಸದಿದ್ದರೂ ಕ್ಷೇತ್ರದ ಅಭಿವೃಧ್ದಿಗೆ ವಿಶೇಷ ಅನುಧಾನ,ನೀರಾವರಿ ಯೋಜನೆಗೆ ಅನುಧಾನ ನೀಡುವಂತೆ ಸಿ.ಎಂ ಅವರಲ್ಲಿ ಬೇಡಿಕೆ ಇಟ್ಟಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ಇಂದುನ ಈ ಭೇಟಿ ಕ್ಷೇತ್ರದಲ್ಲಿ ತೀವೃ ಕುತೂಹಲ ಮೂಡಿಸಿದೆ.ಅಲ್ಲದೇ ಭೇಟಿಯ ಬಗ್ಗೆ ಹೆಚ್ಚೆಚ್ಚು ಪೋಟೋಗಳನ್ನು ಹರಿಬಿಟ್ಟಿರುವುದರ ಹಿಂದೆ ಏನೋ ಅಡಗಿದೆ ಎಂದು ಜಿಜ್ಞಾಸಿಸಲಾಗುತ್ತಿದೆ.ಹಾಗಂತ ಶಾಸಕ ಹೆಬ್ಬಾರ್ ಮತ್ತು ಸಿದ್ದರಾಮಯ್ಯನವರ ಭೇಟಿ ಇದೇ ಮೊದಲಲ್ಲ.ಆದರೆ ಇವತ್ತಿನ ಭೇಟಿಯಲ್ಲಿ ಇನ್ನೆನೋ ಇದೆ ಎನ್ನಿಸುತ್ತಿದೆ.