ಸುದ್ದಿ ಕನ್ನಡ ವಾರ್ತೆ

ದಾಂಡೇಲಿ: ಶಿರಸಿಯಲ್ಲಿ ಡಿಸೆಂಬರ್ 3 ಮತ್ತು 4 ರಂದು ನಡೆಯಲಿರುವ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿ, ವಿಮರ್ಶಕ ಆರ್. ಡಿ. ಹೆಗಡೆ, ಆಲ್ಮನೆಯವರು ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಎನ್. ವಾಸರೆ ತಿಳಿಸಿದ್ದಾರೆ.

 

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು ಶನಿವಾರ ದಾಂಡೇಲಿಯ ಸಾಹಿತ್ಯ ಭವನದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸಮ್ಮೇಳನಾಧ್ಯಕ್ಷರ ಒಮ್ಮತದ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸರ್ವಾಧ್ಯಕ್ಷತೆಗೆ ಜಿಲ್ಲೆಯ ಕೆಲವು ಸಾಹಿತಿಗಳ ಹೆಸರುಗಳ ಪ್ರಸ್ತಾವನೆ ಮತ್ತು ಚರ್ಚೆಯ ನಂತರ ಸಭೆಯಲ್ಲಿ ಅಂತಿಮವಾಗಿ ಸರ್ವಾನುಮತದಿಂದ ಆರ್.ಡಿ. ಹೆಗಡೆಯವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಘೋಷಿಸಲಾಯಿತು ಎಂದು ತಿಳಿಸಿದ್ದಾರೆ.

 

ಸಭೆಯಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಪಿ.ಆರ್ . ನಾಯ್ಕ, ಜಾರ್ಜ್ ಫರ್ನಾಂಡಿಸ್, ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ್ ಆನೆಹೊಸೂರ, ತಾಲೂಕು ಘಟಕಗಳ ಅಧ್ಯಕ್ಷರಾದ ಸುಬ್ರಾಯ ಭಟ್, ಬಕ್ಕಳ, ಸಿರ್ಸಿ, ವಿ.ಎ. ಕೋಣಸಾಲಿ, ಮುಂಡಗೋಡ, ಸುಬ್ರಹ್ಮಣ್ಯ ಭಟ್, ಯಲ್ಲಾಪುರ, ರಾಮಾ ನಾಯ್ಕ, ಕಾರವಾರ, ಗೋಪಾಲಕೃಷ್ಣ ನಾಯಕ, ಅಂಕೋಲಾ, ಸುಬ್ಬಯ್ಯ ನಾಯ್ಕ, ಕುಮಟಾ, ಎಸ್.ಎಚ್. ಗೌಡ, ಹೊನ್ನಾವರ, ನಾರಾಯಣ ನಾಯ್ಕ, ದಾಂಡೇಲಿ, ಸುಮಂಗಲಾ ಅಂಗಡಿ, ಹಳಿಯಾಳ, ಪಾಂಡುರಂಗ ಪಟಗಾರ ಜೋಯಿಡಾ, ಜಿಲ್ಲಾ ಸಮಿತಿ ಸದಸ್ಯರಾದ ಪಿ.ಎಮ್. ಮುಕ್ರಿ, ಕುಮಟಾ, ಎಸ್.ಜಿ. ಬಿರಾದರ, ಹಳಿಯಾಳ, ಸೀತಾ ದಾನಗೇರಿ, ಜೋಯಿಡಾ ಉಪಸ್ಥಿತರಿದ್ದರು.