ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಗುಂಡ್ಕಲ್ ನಲ್ಲಿ ದಿವಂಗತ ಗಂಗಾ ಭಟ್ ರವರ ಸ್ಮರಣಾರ್ಥ ಮಾಗಡಿನ ಶ್ರೀ ವೀರಾಂಜನೇಯ ತಾಳಮದ್ದಲೆ ಕೂಟದ ಕಲಾವಿದರಿಂದ ಅಕ್ಟೋಬರ್ 18ರಂದು ಸಂಜೆ ದಕ್ಷಾದ್ವರ ತಾಳಮದ್ದಲೆ ನಡೆಯಿತು.

 

ಭಾಗವತರಾಗಿ ಗಣಪತಿ ಭಾಗ್ವತ್ ಕವಾಳೆ, ಮಹಾಬಲೇಶ್ವರ ಭಟ್ ಬೆಳಶೇರ ,ಮದ್ದಲೆ ವಾದಕರಾಗಿ ನಾಗಪ್ಪ ಕೋಮಾರ, ಚಂಡೆ ವಾದಕರಾಗಿ ಮಂಜುನಾಥ ಭಾಗವತ್, ಸಂಜಯ್ ಕುಮಾರ್ ಭಾಗವಹಿಸಿದ್ದರು.

ಅರ್ಥದಾರಿಗಳಾಗಿ ನರಸಿಂಹ ಭಟ್ ಕುಂಕಿ ಮನೆ ,ರವೀಂದ್ರ ಭಟ್ ವೈದಿಕರ ಮನೆ ,ಡಾ. ಶಿವರಾಂ ಭಾಗವತ್ ಮಣ್ಕುಳಿ ,ಶ್ರೀಧರ್ ಅಣಲಗಾರ, ಮಂಜುನಾಥ್ ಜೋಶಿ ,ನಾರಾಯಣ ಭಟ್ ಮೊಟ್ಟೆಪಾಲ್ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಕವಾಳೆಯ ಕಲಾರಾಮ ಕಲ್ಚರಲ್ ಫೌಂಡೇಶನ್ ವತಿಯಿಂದ ಹಿರಿಯ ಕೃಷಿಕ ಸಾಮಾಜಿಕ ಕಾರ್ಯಕರ್ತ ಗಣಪತಿ ಭಟ್ ಗೇರಗದ್ದೆ ರವರನ್ನು ಸನ್ಮಾನಿಸಲಾಯಿತು. ಎಪಿಎಂಸಿ ಮಾಜಿ ಅಧ್ಯಕ್ಷ ಎಲ್ ಪಿ ಭಟ್ ಗುಂಡ್ಕಲ್ ಅಭಿನಂದಿಸಿ ಮಾತನಾಡಿದರು.

ಹಿರಿಯರಾದ ಶಿವರಾಂ ಭಟ್ ಗುಂಡ್ಕಲ್, ರಾಮಕೃಷ್ಣ ಭಟ್ ಮಳಲಗಾಂವ್, ನರಸಿಂಹ ಭಟ್ ಗುಂಡ್ಕಲ್, ಫೌಂಡೇಶನ್ ಅಧ್ಯಕ್ಷ ಗಣಪತಿ ಭಾಗ್ವತ್ ಕವಾಳೆ ,ಅನಂತ ಭಾಗ್ವತ್ ಕವಾಳೆ ,ನರಸಿಂಹ ಭಾಗ್ವತ್ ಗುಂಡ್ಕಲ್, ಗಣೇಶ್ ಭಾಗವತ್ ಗುಂಡ್ಕಲ್, ಶಾರದಾ ಭಾಗ್ವತ್ ಮತ್ತಿತರರು ಉಪಸ್ಥಿತರಿದ್ದರು.