ಸುದ್ದಿ ಕನ್ನಡ ವಾರ್ತೆ
ಶಿರಸಿ: ಹುಬ್ಬಳ್ಳಿ ಸೇರಿದಂತೆ ವಿವಿಧ ಘಟನೆಗಳ ಮೇಲಿನ ಆರೋಪಿತರ ಮೇಲಿನ ಪೊಲೀಸ್ ಪ್ರಕರಣ ವಾಪಸ್ ಪಡೆದ ರಾಜ್ಯ ಕಾಂಗ್ರೆಸ್ ಅಪರಾಧ ಮಾಡಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪಿಸಿದರು.
ಅವರು ಭಾನುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮತ ಗಳಿಕೆಗೆ ಮತ ಬ್ಯಾಂಕ್ ಉಳಿಸಿಕೊಳ್ಳಲು ಮುಖ್ಯವಾಹಿನಿಗೆ ಅಲ್ಪ ಸಂಖ್ಯಾತರಕ್ಕೆ ಬಾರದಂತೆ ಮಾಡುತ್ತಿದೆ. ಪ್ರತ್ಯೇಕತೆ ಭಾವನೆ ಬೆಳಸುತ್ತಿದೆ. ಕಾಂಗ್ರೆಸ್ ನ ಈ ಷಡ್ಯಂತರಕ್ಕೆ ಅಲ್ಪ ಸಂಖ್ಯಾತರು ಬಲಿಯಾಗಬಾರದು. ಕಾಂಗ್ರೆಸ್ ರಾಜಕಾರಣ ಮಿತಿ ಮೀರಿ ದೇಶಕ್ಕೆ ಅಪಾಯ ಆಗುವ ಸಾಧ್ಯವಿದೆ. ಹಿಂದುಗಳ ಬಗ್ಗೆ ಬೇರೆಯಾಗಿ, ಅಲ್ಪ ಸಂಕಖ್ಯಾತರ ಬಗ್ಗೆ ಮಾತನಾಡುವಾಗ ಇಡಿಯಾಗಿ ಮಾತನಾಡುತ್ತದೆ ಎಂದು ಆಕ್ಷೇಪಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರ ೧೫೭ ಜನರ ಮೇಲಿನ ದೊಂಬಿ, ಅಪರಾಧಿಗಳಿಗೆ ನಾವಿದ್ದೇವೆ ಎಂಬ ಸ್ಪಷ್ಟ ಸಂದೇಶ ನೀಡಿ ಪ್ರಕರಣ ವಾಪಸ್ ಪಡೆದಿದೆ.
ರಾಷ್ಟ್ರ ದ್ರೋಹಿಗಳಿಗೆ ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ, ಪೊಲೀಸರ ಜಿವಕ್ಕೇ ಕಂಟಕ ತಂದವರಿಗೂ ನೇರ ಬಲ ಕೊಟ್ಟಿದೆ. ಕಾಂಗ್ರೆಸ್ ಗೆ ನ್ಯಾಯಾಂಗ, ಕಾನೂನು ಯಾವ ಅಂಶಕ್ಕೂ ಗಂಭೀರತೆ ಇಲ್ಲ. ಸಂವಿಧಾನದ ಬಗ್ಗೆ ಗೌರವ ಇಲ್ಲ. ದೇಶದ ಕಾಂಗ್ರೆಸ್ ದ್ರೋಹಿಗಳಿಗೆ ಬಲ ನೀಡುವ ಹೀನ ಸ್ಥಿತಿಗೆ ಇಳಿದಿದೆ.ಸರಕಾರ ಇದೆ. ಆಡಳಿತ ಇಲ್ಲ. ಭ್ರಷ್ಟಾಚಾರ ಮಿತಿ ಮೀರಿದೆ, ಸರಕಾರೀಕರಣಗೊಳಿಸಿದೆ ಎಂದು ಜರಿದರು.
ಸಿಎಂ ಸಿದ್ದರಾಮಯ್ಯ ನಿಷ್ಪಕ್ಷಪಾತ ತನಿಖೆಗೆ ರಾಜೀನಾಮೆ ನೀಡಬೇಕು. ಅಧಿಕಾರ ಸ್ವಾರ್ಥಕ್ಕೆ ಸಿಎಂ ಬಳಸಿಕೊಳ್ಳುತ್ತಿದ್ದಾರೆ. ಗ್ಯಾರೆಂಟಿ ಸರಿಯಾಗಿಲ್ಲ. ಹೊಂಡ ತುಂಬಲೂ ಆಗದಂತೆ ಇದೆ. ಅತಿ ಮಳೆಗೆ ಎಲ್ಲ ಹಾನಿಯಾಗಿದೆ. ಒಂದು ರೂಪಾಯಿ ಪರಿಹಾರ ಇಲ್ಲ. ಅಭಿವೃದ್ದಿಗೂ, ಮನೆ ಬಿದ್ದವರಿಗೂ ನೆರವಿಲ್ಲ ಎಂದೂ ಹೇಳಿದರು.
ಈ ವೇಳೆ ವಕ್ತಾರ ಸದಾನಂದ ಭಟ್ಟ, ನಗರಸಭೆ ಅಧ್ಯಕ್ಷೆ ಶರ್ಮಿಲಾ ಮಾದನಗೇರಿ, ನಾಗರಾಜ ನಾಯ್ಕ, ಶ್ರೀಕಾಂತ ನಾಯ್ಕ, ಆನಂದ ಸಾಲೇರ, ರಮಾಕಾಂತ ಭಟ್ಟ, ನಂದನ ಸಾಗರ, ರವಿ ಶೆಟ್ಟಿ, ಮಂಜುನಾಥ ಭಂಡಾರಿ ಇತರರು ಇದ್ದರು.