ಸುದ್ದಿ ಕನ್ನಡ ವಾರ್ತೆ
ಅಳ್ನಾವರ: ಶ್ರದ್ಧೆ, ಭಕ್ತಿ ಮೌಲ್ಯ ಬದುಕಲ್ಲಿ ಅಳವಡಿಸಿಕೊಳ್ಳಬೇಕು. ಧಮರ್ಾಚರಣೆಯಲ್ಲಿ ಸದಾ ಬಾಗಿಯಾಗಬೇಕು. ಧರ್ಮವಂತರಾಗಿ ಸನ್ನಡತೆಯ ಸನ್ಮಾರ್ಗದಲ್ಲಿ ಮುನ್ನೆದಾಗ
ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ಶ್ರೀಶೈಲದ ಡಾ. ಚನ್ನಸಿದ್ದರಾಯ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ವೀರಭದ್ರೇಶ್ವರ ದೇವಸ್ಥಾನಕ್ಕೆ ಶನಿವಾರ ಸಂಜೆ ಆಗಮಿಸಿದ ಅವರು ಗದ್ದುಗೆಯ ದರ್ಶನ ಪಡೆದ ನಂತರ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿ, ವೀರಭದ್ರೇಶ್ವರನ ಪಾದಕ್ಕೆ ಶರಣಾಗಾಗ ನಿಮ್ಮ ಬದುಕು ಸುಂದರವಾಗಿ ಅರಳಲು ಸಾಧ್ಯ. ಗುರು ಪರಂಪರೆ, ಧರ್ಮ, ಶಿವ ಭಕ್ತಿ, ಆಚಾರ, ವಿಚಾರ, ಸಂಸ್ಕ್ರತಿ ಪರಂಪರೆ ಉಳಿಸಿ ಬೆಳೆಸಬೇಕು ಎಂದರು.
ಪುರಾಣದಲ್ಲಿ ಉಲ್ಲೇಖವಾದ ವೀರಭದ್ರನ ಜನನ ಹಾಗೂ ಶಿವನ ರಕ್ಷಣೆಗೆ ಸಾಗಿದ ಹಾದಿಯನ್ನು ಏಳೆ ಏಳೆಯಾಗಿ ತಿಳಿಸಿದ ಶ್ರೀಗಳು ಶಿವಭಕ್ತಿ ಪಾಲನೆ ಮಾಡಿದ ವೀರಭದ್ರ ಲಿಂಗರೂಪದಲ್ಲಿ ಯಡೂರಿನಲ್ಲಿ ನೆಲೆಸಿದ್ದಾನೆ ಎಂಬ ಪ್ರತೀತ ಇದೆ. ಕೃಷ್ಣಾ ನದಿ ದಡದಲ್ಲಿ ವೀರಭದ್ರ ತೋರಿದ ವೀರಾವೇಶದ ಸನ್ನಿವೇಶಗಳನ್ನು ತಿಳಿಸಿದರು.
ಉತ್ತರ ಕನ್ನಡ ಜಿಲ್ಲೆಯ ಕಳಸಾಯಿಯಲ್ಲಿ ನಿಸರ್ಗ ರಕ್ಷಣೆ ಜೊತೆಗೆ ನಿಸರ್ಗ ಚಿಕಿತ್ಸಾ ಕೇಂದ್ರದ ಅಭಿವೃದ್ಧಿಯ ಚಿಂತನೆಗೆ ವೇಗ ನೀಡಲಾಗಿದೆ. ಪ್ರತಿ ವರ್ಷ ಶ್ರಾವಣ ಮಾಸದ ನಂತರ ತಾವು ಇಲ್ಲಿಗೆ ಆಗಮಿಸಿ ಧಮರ್ಾಷ್ಟಾನ ಮಾಡಿ ಈ ಬಾಗದ ಭಕ್ತರಿಗೆ ದರ್ಶನ ನೀಡುವ ಕಾರ್ಯ ನಡೆದಿದೆ. ಕಳೆದ ಎರಡು ದಿನ ಹಳಿಯಾಳದಲ್ಲಿ ಉತ್ಸವ ಯಶಸ್ವಿಯಾಗಿ ನಡೆಯಿತು ಎಂದರು.
ಹಿರಿಯರಾದ ಎಂ.ಸಿ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಏಳು ವರ್ಷದ ಹಿಂದೆ ಶ್ರೀಗಳ ಅಮೃತ ಹಸ್ತದಿಂದ ಉದ್ಘಾಟನೆಗೊಂಡ ಇಲ್ಲಿನ ವೀರಭದ್ರೇಶ್ವರ ದೇವಸ್ಥಾನ ಸಮಾಜದ ಎಲ್ಲ ವರ್ಗದ ಜನರ ಭಕ್ತಿಯ ತಾಣವಾಗಿದೆ. ಪ್ರತಿ ಅಮವಾಸ್ಯೆಯಂದು ಪಲ್ಲಕ್ಕಿ ಸೇವೆ, ಮಹಾಪ್ರಸಾದ ಕಾರ್ಯಕ್ರಮ ಜೊತೆಗೆ ವಷರ್ಾಚರಣೆ ಕಾರ್ಯಕ್ರಮ ಬಹು ವಿಜ್ರಂಭಣೆಯಿಂದ ಆಚರಿಸುತ್ತಾ ಸಾಗಲಾಗುತ್ತಿದೆ. ಪೂಜ್ಯರ ಆಗಮನ ಈ ಭಾಗದ ಭಕ್ತರನ್ನು ಪುಳಕಿತವಾಗಿಸಿದೆ. ಕಳಸಾಯಿಯ ಶಾಂತಿ ವಾತಾವರಣದಲ್ಲಿ ಶ್ರೀಗಳು ಕಂಡ ಕನಸ್ಸನ್ನು ನನಸ್ಸಾಗಿಸಲು ಈ ಭಾಗದ ಭಕ್ತರು ಸದಾ ತಮ್ಮ ಜೊತೆ ಸಹಕಾರ ನೀಡುತ್ತಾರೆ ಎಂದರು.
ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳ ಪಾದಪೂಜೆ ನಡೆಯಿತು. ಪೂಣರ್ಿಮಾ ಮುತ್ನಾಳ ಭಕ್ತಿ ಗೀತೆ ಹಾಡಿದರು. ಎಸ್.ಡಿ.ದೇಗಾವಿಮಠ ಮಾತನಾಡಿದರು. ದೇವಸ್ಥಾನ ಟ್ರಸ್ಟ್ ಸಮಿತಿ ವತಿಯಿಂದ ಶ್ರೀಗಳ ಸತ್ಕಾರ ನಡೆಯಿತು. ಅಂಬಿಕಾನಗರದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಗಳನ್ನು ಸತ್ಕರಿಸಲಾಯಿತು.
ದೇವಸ್ಥಾನ ಟ್ರಸ್ಟ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ವೀರಭದ್ರಗೌಡ ಪಾಟೀಲ, ಶಿವು ದೇಸಾಯಿ, ರಾಜು ಬೆಂಡಿಗೇರಿ, ವೀರಶೈವ ಸಮಾಜದ ಅಧ್ಯಕ್ಷ
ಎಸ್.ಬಿ.ಪಾಟೀಲ, ರಾಜಶೇಖರ ಕೌಜಲಗಿ, ಪ್ರವೀಣ ವಾರದ, ಜಗದಿಶ ಚಚಡಿ, ರುದ್ರಪ್ಪ ಹಂಚಿಮನಿ, ಮಹಾದೇವ ಕುಂಬಾರ, ಪ್ರಕಾಶ ಕೌಜಲಗಿ, ಮಂಜುನಾಥ ಹಕ್ಕಿ ,
ಜಯಶ್ರೀ ಸೊಪ್ಪಿ, ಕಸ್ತೂರಿ ತೆಂಗಿನಮಠ, ರತ್ನಾ ಹಿರೇಮಠ, ನೇತ್ರಾವತಿ ಕಡಕೋಳ, ಯಲ್ಲಾರಿ ಹುಬ್ಳೀಕರ ಇದ್ದರು