ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ: ತಮ್ಮ ಸೇವಾ ನಿಷ್ಠೆಯಿಂದ ಹೆಸರು ಪಡೆದಿರುವ ಯಲ್ಲಾಪುರದ ಡಾ,.ರಾಮಕೃಷ್ಣ ಮುದ್ದೇಪಾಲ್ ರವರ ಸೇವೆ ಗುರುತಿಸಿ ಕರ್ನಾಟಕ ಸರ್ಕಾರ ಅವರಿಗೆ ಪದೋನ್ನತಿ ನೀಡಿ ಆದೇಶ ಹೊರಡಿಸಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ದೇಹಳ್ಳಿ ಗ್ರಾಮದ ಹೆಮ್ಮೆಯ ಪುತ್ರರಾಗಿರುವ ಪೆÇಲೀಸ್ ಇಲಾಖೆಯ ಅನುಭವಸಂಪನ್ನ ಹಾಗೂ ಕಾರ್ಯಕ್ಷಮ ಅಧಿಕಾರಿ ಡಾ. ರಾಮಕೃಷ್ಣ ಮುದ್ದೇಪಾಲ ಅವರಿಗೆ ರಾಜ್ಯ ಸರ್ಕಾರ ಡಿಐಜಿಪಿ ಹುದ್ದೆಗೆ ಪದೋನ್ನತಿ ನೀಡಿ ಅಧಿಕೃತ ಆದೇಶ ಹೊರಡಿಸಿದೆ.
ಶಿಸ್ತು, ಕಾರ್ಯನಿಷ್ಠೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿರುವ ಅವರು, ತಮ್ಮ ಸೇವಾ ಜೀವನದಲ್ಲಿ ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಗುರುತಿಸಿಕೊಂಡಿದ್ದಾರೆ. ಕರ್ನಾಟಕ ರಾಜ್ಯ ಪೆÇಲೀಸ್ ಇಲಾಖೆಯಲ್ಲಿ ಹಲವು ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ಡಾ. ರಾಮಕೃಷ್ಣ ಮುದ್ದೇಪಾಲ ಅವರನ್ನು, ಹೊಸದಾಗಿ ರಚನೆಯಾಗಿರುವ ಬೆಂಗಳೂರಿನ ಐಆರ್‍ಬಿ ಆವತಿ ವಲಯದ ಡಿಐಜಿಪಿಯಾಗಿ ನೇಮಕ ಮಾಡಲಾಗಿದೆ.
ಯಲ್ಲಾಪುರದ ಮುದ್ದೇಪಾಲಿನ ಡಾ. ರಾಮಕೃಷ್ಣ ಅವರ ಶ್ರೇಷ್ಠ ಸೇವೆಯನ್ನು ಪರಿಗಣಿಸಿ 2025ರ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಪ್ರತಿಷ್ಠಿತ ರಾಷ್ಟ್ರಪತಿಗಳ ಶ್ಲಾಘನೀಯ ಪೆÇಲೀಸ್ ಸೇವಾ ಪದಕ ಪ್ರದಾನ ಮಾಡಲಾಗಿತ್ತು. ಇದೀಗ ದೊರೆತಿರುವ ಡಿಐಜಿಪಿ ಹುದ್ದೆಯ ಪದೋನ್ನತಿ, ಅವರ ಸುದೀರ್ಘ ಹಾಗೂ ಸಮರ್ಪಿತ ಸೇವೆಗೆ ದೊರೆತ ಮತ್ತೊಂದು ಮಹತ್ವದ ಗೌರವವಾಗಿದೆ.
ಡಾ. ರಾಮಕೃಷ್ಣ ಮುದ್ದೇಪಾಲ ರವರ ಸಾಧನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ಪದೋನ್ನತಿಯ ಮೂಲಕ ಡಾ. ರಾಮಕೃಷ್ಣ ಮುದ್ದೇಪಾಲ ಅವರು ಯಲ್ಲಾಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಮತ್ತಷ್ಟು ಎತ್ತಿ ಹಿಡಿದಿದ್ದಾರೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
