ಸುದ್ಧಿಕನ್ನಡ ವಾರ್ತೆ
ಅಂಕೋಲಾ: ಪುರೋಹಿತ ಎಂಬ ಕಾರಣಕ್ಕೆ ತಾನು ಪ್ರೀತಿಸಿದ್ದ ಹುಡುಗಿ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಪೌರೋಹಿತ್ಯ ಮಾಡಿಕೊಂಡಿದ್ದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅಸ್ಲಗದ್ಧೆ ಗ್ರಾಮದಲ್ಲಿ ನಡೆದಿದೆ.
ಪುರೋಹಿತ ಪವನ್ ಭಟ್ ಈತನೇ ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಅಂಕೋಲಾ ತಾಲೂಕಿನ ಪವನ್ ಭಟ್ (24) ವೃತ್ತಿಯಲ್ಲಿ ಪೌರೋಹಿತ್ಯ ಮಾಡಿಕೊಂಡಿದ್ದ. ಇದೇ ಊರಿನ ಹುಡುಗಿಯೊಂದಿಗೆ ಪ್ರೀತಿಯ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ಪ್ರೀತಿಯನ್ನು ವಿವಾಹವಾಗಿ ಮುಂದುವರೆಸಲು ಪವನ್ ಭಟ್ ಆಕೆಯ ಮೇಲೆ ಒತ್ತಾಯ ಹೇರಿದ್ದ. ಆದರೆ ಆ ಹುಡುಗಿಯು ಮದುವೆಗೆ ನಿರಾಕರಿಸಿದ್ದಳು. ಪ್ರೀತಿಯ ನಿರಾಕರಣೆಯಿಂದ ಮನನೊಂದು ಪವನ್ ಭಟ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎನ್ನಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೋಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಹವ್ಯಕರಲ್ಲಿ ಅದರಲ್ಲೂ ಪೌರೋಹಿತ್ಯ ಮಾಡಿಕೊಂಡು ಅಥವಾ ಕೃಷಿ ,ಮಾಡಿಕೊಂಡು ಇರುವವರಿಗೆ ಹೆಣ್ಣು ಕೊಡುವವರಿಲ್ಲ, ಇಂತಹ ಸ್ಥಿತಿ ಕಳೆದ ಹಲವು ವರ್ಷಗಳಿಂದ ಕಂಡುಬರುತ್ತಿದೆ. ಇದರಿಂದಾಗಿ ಅದೆಷ್ಟೊ ಪೌರೋಹಿತ್ಯ ಮಾಡಿಕೊಂಡಿರುವ ಯುವಕರಿಗೆ ಮದುವೆ ಭಾಗ್ಯ ಬಂದಿಲ್ಲ. ಹೀಗಿರುವಾಗ ಇಂತಹ ಪ್ರೇಮ ಪ್ರಕರಣಗಳು ಕೂಡ ದುರಂತದಲ್ಲಿಯೇ ಮುಕ್ತಾಯಗೊಳ್ಳುತ್ತಿರುವುದು ಆತಂಕ ಪಡುವ ಸಂಗತಿಯಾಗಿದೆ.
