ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ ನಗರದ ಹಿಂದೂ ಮಹಿಳೆ ರಂಜಿತಾ ಎಂಬುವವರನ್ನು ರಫೀಕ್ ಎಂಬ ವ್ಯಕ್ತಿ ಕತ್ತು ಕೊಯ್ದು ಕೊಲೆ ಮಾಡಿರುವುದನ್ನು ಬಿಜೆಪಿ ಮತ್ತು ಹಿಂದೂ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದು ಬಿಜೆಪಿ ಮುಖಂಡ ಹರಿಪ್ರಕಾಶ್ ಕೋಣೆಮನೆ ಖಂಡಿಸಿದ್ದಾರೆ.

ಹಿಂದೂ ಮಹಿಳೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ರಫೀಕ್ ನನ್ನು ಶೀಘ್ರದಲ್ಲಿ ಪತ್ತೆ ಮಾಡಿ ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳಬೇಕು. ಪೊಲೀಸರ ನಿಷ್ಕ್ರಿಯತೆ ಅಥವಾ ಒತ್ತಡದ ಕಾರಣಕ್ಕೆ ಕ್ರಮ ವಿಳಂಬವಾಗಿ ಹಿಂದೂ ಸಮಾಜದ ತಾಳ್ಮೆಯನ್ನು ಯಾರೂ ಕೂಡ ಪರೀಕ್ಷೆ ಮಾಡಬಾರದು.
ಒಂದು ವರ್ಷದ ಹಿಂದೆ ಅಪ್ರಾಪ್ತ ಹಿಂದೂ ಯುವತಿಯ ಮೇಲೆ ಇದೇ ತೆರನಾದ ಲೈಂಗಿಕ ಹಲ್ಲೆ ನಡೆದಾಗ ಪ್ರಭಾವಿಗಳು ಒತ್ತಡ ಹಾಕಿ ಸಂಸ್ತ್ರಸ್ತೆಯ ಪಾಲಕರು ದೂರು ಕೊಡದಂತೆ ತಡೆಹಿಡಿದಿದ್ದರು. ಪಾಲಕರ ಅಸಹಾಯಕತೆ ಹಾಗೂ ಭೀತಿಯ ಕಾರಣಕ್ಕೆ ಸಂತ್ರಸ್ತೆಗೆ ನ್ಯಾಯ ಕೊಡಿಸಲು ಸಾಧ್ಯವಾಗಿರಲಿಲ್ಲ. ದಿನೇ ದಿನೇ ಇಂತಹ ಪ್ರಕರಣಗಳು ಯಲ್ಲಾಪುರ ತಾಲೂಕಿನಲ್ಲಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಹರಿ ಪ್ರಕಾಶ್ ಕೋಣೆಮನೆ ಆತಂಕ ವ್ಯಕ್ತಪಡಿಸಿದ್ದಾರೆ.
ಈಗ ನಡೆದಿರುವ ಘಟನೆ ಹಿನ್ನೆಲೆಯಲ್ಲಿ ಸಾಮೂಹಿಕವಾಗಿ ಆಲೋಚನೆ ಮಾಡಿ ಮುಂದಿನ ನಡೆ ನಿರ್ಧರಿಸಲಾಗುವುದು. ಇಂತಹ ಅಮಾನವೀಯ ವರ್ತನೆ ವಿರುದ್ಧ ಹಿಂದೂ ಸಮಾಜ ಸಂಘಟಿತವಾಗಿ ಮತ್ತು ಸಮರ್ಥವಾಗಿ ಪ್ರತಿಕ್ರಿಯೆ ನೀಡಲಿದೆ. ಹಿಂದೂ ಮಹಿಳೆಯ ಹತ್ಯೆ ಖಂಡಿಸಿ ಭಾನುವಾರ ಯಲ್ಲಾಪುರ ಪಟ್ಟಣ ಬಂದ್‌ಗೆ ಹಿಂದೂ ಸಂಘಟನೆಗಳ ವತಿಯಿಂದ ಕರೆ ನೀಡಲಾಗಿದೆ. ಬಂದ್‌ಗೆ ಎಲ್ಲರೂ ಬೆಂಬಲಿಸಲು ಮಾಧ್ಯಮದ ಮೂಲಕ ಕೋರಿದೆ.
