ಸುದ್ಧಿಕನ್ನಡ ವಾರ್ತೆ
ಕಾರವಾರ: ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ಭಾನುವಾರ ಕಾರವಾರದ ನೌಕಾನೆಲೆಗೆ ಭೇಟಿ ನೀಡಿ ಭಾರತೀಯ ನೌಕಾಪಡೆಯ ಕಲವರಿ ಶ್ರೇಣಿಯ ಜಲಾಂತರ್ಗಾಮಿ  INS  ವಾಗ್ಮೀರ್ ನಲ್ಲಿ ಪ್ರವಾಸ ಮಾಡಿದರು.

ಭಾರತದ ಮಾಜಿ ರಾಷ್ಟ್ರಪತಿ ಭಾರತ ರತ್ನ ಡಾ.APJ ಅಬ್ದುಲ್ ಕಲಾಂ ರವರ ನಂತರ ನೌಕಾ ಜಲಾಂತರ್ಗಾಮಿ ನೌಕೆಯಲ್ಲಿ ಪ್ರಯಾಣಿಸಿದ ಎರಡನೇಯ ರಾಷ್ಟ್ರಪತಿಗಳು ಎಂಬ ಹೆಗ್ಗಳಿಕೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪಾತ್ರರಾಗಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ರವರು ಶನಿವಾರ ಸಂಜೆ ಗೋವಾಕ್ಕೆ ಆಗಮಿಸಿದರು. ಭಾನುವಾರ ಬೆಳಿಗ್ಗೆ ಗೋವಾದ ವಾಸ್ಕೊದಲ್ಲಿ ಐಎನ್ ಎಸ್ ಹಂಸ ನೆಲೆಯಲ್ಲಿ ನೌಕಾಪಡೆಯಿಂದ ಗೌರವ ವಂದನೆ ಸ್ವೀಕರಿಸಿದರು. ನಂತರ ಅವರು ಕಾರವಾರದಲ್ಲಿರುವ ನೌಕಾ ನೆಲೆಗೆ ಭೇಟಿ ನೀಡಿದರು.

ನೌಕಾಪಡೆಯ ಮುಖ್ಯಸ್ಥರಾದ ಎಡ್ಮಿರಲ್ ದಿನೇಶ್ ತ್ರಿಪಾಟಿ ರವರ ಸಮ್ಮುಖದಲ್ಲಿ ರಾಷ್ಟ್ರಪತಿಗಳು ಐಎನ್ ಎಸ್ ವಾಗ್ಮಿರ್ ಜಲಾಂತರ್ಗಾಮಿಯ ಆಂತರಿಕ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡು ಇದೇ ನೌಕೆಯಲ್ಲಿ ಆಳ ಸಮುದ್ರದಲ್ಲಿ ಪ್ರಯಾಣ ಮಾಡಿದರು.
ಭಾರತೀಯ ನಿರ್ಮಿತ ಐಎನ್ ಎಸ್ ವಾಗ್ಮಿರ್ ಸ್ವಾವಲಂಭಿ ಭಾರತ ಮತ್ತು ನೌಕಾಪಡೆಯ ಆಧುನಿಕತೆಯ ಸಂಕೇತವಾಗಿದೆ.