ಸುದ್ದಿ ಕನ್ನಡ ವಾರ್ತೆ

ರಾಷ್ಟ್ರೀಯ ಪ್ರಜಾಪ್ರಭುತ್ವ ಮೈತ್ರಿಕೂಟ (NDA) ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಗಳಿಸಿರುವ ಐತಿಹಾಸಿಕ ವಿಜಯವು, ಅಭಿವೃದ್ಧಿ ಮತ್ತು ದಕ್ಷ ಆಡಳಿತದ ಪರವಾಗಿ ಬಿಹಾರದ ಪ್ರಜ್ಞಾವಂತ ಮತದಾರರು ನೀಡಿರುವ ಸ್ಪಷ್ಟ ಮತ್ತು ಪ್ರಬಲ ಜನಾದೇಶವಾಗಿದೆ.

ಈ ಮಹತ್ವದ ನಿರ್ಧಾರಕ್ಕಾಗಿ ಬಿಹಾರದ ಸಮಸ್ತ ನಾಗರಿಕರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
​ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿನ ‘ಡಬಲ್ ಇಂಜಿನ್ ಸರ್ಕಾರದ’ ಬದ್ಧತೆ ಮತ್ತು ಕಾರ್ಯವೈಖರಿಯ ಮೇಲೆ ಬಿಹಾರದ ಜನರು ತಮ್ಮ ಅಚಲ ನಂಬಿಕೆಯನ್ನು ಮತ್ತೊಮ್ಮೆ ದೃಢಪಡಿಸಿದ್ದಾರೆ.

​ಈ ವಿಜಯವು ಕೇವಲ ರಾಜಕೀಯ ಗೆಲುವಲ್ಲ; ಇದು ಉತ್ತಮ ಆಡಳಿತ, ಯುವಜನರ ನೇತೃತ್ವದ ಸಮಗ್ರ ಅಭಿವೃದ್ಧಿ, ಮಹಿಳೆಯರ ಸಬಲೀಕರಣ ಮತ್ತು ‘ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಎಂಬ ಮಂತ್ರದ ಅನುಷ್ಠಾನಕ್ಕೆ ದೊರೆತ ಅನುಮೋದನೆ ಯಾಗಿದೆ.
​ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಡೆಗಣಿಸಿ, ಆಧಾರರಹಿತ ಟೀಕೆಗಳು ಮತ್ತು ಸುಳ್ಳು ಅಪಪ್ರಚಾರಗಳ ರಾಜಕಾರಣವನ್ನು ಮತದಾರರು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. ಅಂತಿಮವಾಗಿ, ಅಭಿವೃದ್ಧಿ ಮತ್ತು ದೇಶಭಕ್ತಿಯೇ ಗೆದ್ದಿದೆ ಮತ್ತು ನಕಾರಾತ್ಮಕ ಪ್ರಚಾರಗಳು ಸೋತಿವೆ. ಈ ಫಲಿತಾಂಶವು ರಾಷ್ಟ್ರದ ಅಭಿವೃದ್ಧಿಯ ದೃಷ್ಟಿಯಿಂದ ಒಂದು ಹೊಸ ಭಾಷ್ಯವನ್ನು ಬರೆದಿದೆ.

ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸದರು ಉತ್ತರ ಕನ್ನಡ.