ಸುದ್ದಿ ಕನ್ನಡ ವಾರ್ತೆ
ಜೋಯಿಡಾ 13 ಗುರುವಾರ ಹರಿಯಾಣದ ಪಾಣಿಪತ್ ನಲ್ಲಿ ನಡೆದ 69 ನೇ SGFI ರಾಷ್ಟ್ರ ಮಟ್ಟದ ಪ.ಪೂ ಕಾಲೇಜುಗಳ ಕುಸ್ತಿ ಕ್ರೀಡಾ ಕೂಟದಲ್ಲಿ ಬಿ.ಜಿ.ವಿ.ಎಸ್ ಪ.ಪೂ ಕಾಲೇಜು ರಾಮನಗರದ (ಉ.ಕ) ಕುಸ್ತಿ ಪಟು ಕು. ಮನಿಷಾ ಜಿ.ಸಿದ್ದಿ -72 ಕೆ.ಜಿ ವಿಭಾಗದಲ್ಲಿ ಕಂಚಿನ ಪದಕ ಪಡೆಯುವ ಮೂಲಕ ..ನಮ್ಮ ಕಾಲೇಜಿಗೆ .ಹಳಿಯಾಳದ ಕ್ರೀಡಾ ವಸತಿ ನಿಲಯಕ್ಕೆ . ಉತ್ತರ ಕನ್ನಡ ಜಿಲ್ಲೆಗೆ ರಾಜ್ಯಕ್ಕೆ ಅಮೋಘ ಸಾಧನೆ ಮಾಡಿರುತ್ತಾರೆ..
ರಾಮನಗರ ಕಾಲೇಜ್ ನಲ್ಲಿ ಕಳೆದ 2012 ರಿಂದ ಸೇವೆ ಸಲ್ಲಿಸುತ್ತಿರುವ ದೈಹಿಕ ಶಿಕ್ಷಕ ಸಂಜಯ ಗೌಡ ಅವರು ಅಪಾರ ಕ್ರೀಡಾ ಆಸಕ್ತರು ಅವರ ಪ್ರಯತ್ನದಲ್ಲಿ ಕಾಲೇಜು ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ಸಾಕಷ್ಟು ವಿಶೇಷ ಸಾಧನೆ ಮಾಡುತ್ತಿದ್ದಾರೆ, ಇದು ತಾಲೂಕಿಗೆ ಹೆಮ್ಮೆಯ ವಿಷಯ ವಾಗಿದೆ.
ಮನಿಷಾ ಸಿದ್ದಿ ಇವರ ಸಾಧನೆಗೆ ಬಾಪೂಜಿ ಗ್ರಾಮೀಣ ವಿಕಾಸ ಸಮಿತಿ ಕಾರವಾರ ಅಧ್ಯಕ್ಷರು ಶ್ರೀಮತಿ ವನಿತಾ ಪ್ರಭಾಕರ ರಾಣೆ, ಉಲ್ಲಾಸ ನಾಯ್ಕ ಉಪಾಧ್ಯಕ್ಷರು, ಮಂಜುನಾಥ ಪವಾರ್ ಕಾರ್ಯದರ್ಶಿ, ಕಿಶೋರ ರಾಣೆ ಜಂಟಿ ಕಾರ್ಯದರ್ಶಿ. ಗಜೇಂದ್ರ ಗಾಂದಲೆ ಹಾಗೂ ಸದಸ್ಯರು, ಕಾಲೇಜಿನ ಪ್ರಾಚಾರ್ಯರು ಪ್ರೇಮಾನಂದ ಎಸ್.ಪರಬ, ದೈಹಿಕ ಶಿಕ್ಷಣ ಉಪನ್ಯಾಸಕ ಸಂಜಯ ಜಿ. ಗೌಡ ಹಾಗೂ ಕಾಲೇಜಿನ ಎಲ್ಲಾ ಸಿಬ್ಬಂದಿಗಳು ಶುಭವನ್ನು ಹಾರೈಸಿರುತ್ತಾರೆ.
