ಸುದ್ದಿ ಕನ್ನಡ ವಾರ್ತೆ
. ಕಾರವಾರ:ತಾಲೂಕಿನ ಕೈಗಾ ಅಣುಸ್ಥಾವರದ ಒಳ ಆವರಣದಲ್ಲಿರುವ ಅಣುತ್ಯಾಜ್ಯದ ಘಟಕದ ಕಾವಲಿಗೆ ಇದ್ದ ಸಿಐಎಸ್ಎಫ್ ಸಿಬ್ಬಂದಿ ಮೇಲೆ ಗೇಟ್ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.
ಮಹಾರಾಷ್ಟ್ರದ ಮಹಿಮಾಗಡ್ ದ ಶೇಖರ ಭೀಮರಾವ್ ಜಗದಾಲೆ (48)ಅವಘಡದಲ್ಲಿ ಮೃತಪಟ್ಟ ಸಿಬ್ಬಂದಿ.ಅಣುತ್ಯಾಜ್ಯ ಘಟಕದ ಡಂಪಿಂಗ್ ಯಾರ್ಡಗೆ ತ್ಯಾಜ್ಯವನ್ನು ಹಾಕಿದ್ದಾರೆಂದು ಪರಿಶೀಲನೆ ಮಾಡಲು ಹೋದಾಗ ಕಬ್ಬಿಣದ ಗೇಟ್ ತುಂಡಾಗಿ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡ ಕಾರಣ,ಅಲ್ಲಿನ ಸಿಬ್ಬಂದಿಗಳು ಪ್ರಾಥಮಿಕ ಚಿಕಿತ್ಸೆಗೆ ಕರೆದೊಯ್ದು,ಹೆಚ್ಚಿನ ಚಿಕಿತ್ಸೆಗೆ ಕೈಗಾದ ಕೆಜಿಎಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾರೆ. ಘಟನೆ ಸಂಬಂಧ ಮಲ್ಲಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
