ಸುದ್ದಿ ಕನ್ನಡ ವಾರ್ತೆ
ಮುಂಬೈ:ನಗರದ ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ದಕ್ಷಿಣಆಫ್ರಿಕಾ ತಂಡದ ವಿರುದ್ಧ 52 ರನ್ ಗಳ ಅಂತರದಿಂದ ಸೋಲಿಸಿ ಚೊಚ್ಚಲ ವಿಶ್ವಕಪ್ ನ್ನು ಗೆದ್ದು ಈ ಮೂಲಕ ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಚೊಚ್ಚಲ ವಿಶ್ವಕಪ್ ಗೆದ್ದು ಹೊಸ ಇತಿಹಾಸ ಸೃಷ್ಟಿಸಿತು.
ಪಂದ್ಯದ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ನಿಗದಿತ 50 ಓವರಗಳಲ್ಲಿ 298 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಭಾರತ ನೀಡಿದ ಬೃಹತ್ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾದ ತಂಡವು 246 ರನ್ ಗಳಿಗೆ ಅಲೌಟ ಆಯಿತು. ಭಾರತದ ಪರ ಬ್ಯಾಟಿಂಗ್ ನಲ್ಲಿ ಶಪಾಲಿ ವರ್ಮಾ (87 )ರನ್ ಹಾಗೂ ದೀಪ್ತಿ ಶರ್ಮಾ( 58)ರನ್ ಗಳಿಸಿದರು.
ಬ್ಯಾಟಿಂಗ್ ನಲ್ಲಿ ಮಿಂಚಿದ ದೀಪ್ತಿ ಶರ್ಮಾ ಬೌಲಿಂಗನಲ್ಲಿ ಐದು ವಿಕೆಟ ಪಡೆದು ಗೆಲುವಿಗೆ ಕಾರಣರಾದರು. ಶಪಾಲಿ ವರ್ಮಾ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರೆ,ದೀಪ್ತಿ ಶರ್ಮಾ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಪಟ್ಟಕ್ಕೇರುವ ಕನಸು ಕಾಣುತ್ತಿದ್ದ ಭಾರತ ವನಿತೆಯರ ತಂಡವು ಪೈನಲ್ ನಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಗೆದ್ದು ಚೊಚ್ಚಲ ವಿಶ್ವಕಪ್ ಗೆಲ್ಲಲಿ ಎಂಬ ಕೋಟ್ಯಾಂತರ ಭಾರತೀಯರ ಹಾರೈಕೆಯ ಕನಸು ನನಸಾಯಿತು.ಭಾರತೀಯ ವನಿತೆಯರ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
