ಸುದ್ದಿ ಕನ್ನಡ ವಾರ್ತೆ
. ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ತುಂಬೆಬೀಡು ಗ್ರಾಮದಲ್ಲಿ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯು ಆಯೋಜಿಸಿದ್ದ “ಬೇಡ್ತಿ-ವರದಾ ನದಿ ಜೋಡಣೆ ವಿರೋಧಿಸಿ ಜನಜಾಗೃತಿ ಸಮಾವೇಶ”ವು
ಸೋಂದಾ ಸ್ವರ್ಣವಲ್ಲಿ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ನಡೆದ ಈ ಬೃಹತ್ ಸಭೆಯಲ್ಲಿ ಮಾನ್ಯ ಸಂಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗವಹಿಸಿ , ನಮ್ಮ ಉತ್ತರ ಕನ್ನಡ ಜಿಲ್ಲೆಯು ಈಗಾಗಲೇ ಅನೇಕ ಪರಿಸರ ಮಾರಕ ಯೋಜನೆಗಳಿಗೆ ತ್ಯಾಗ ಮಾಡಿದೆ ಎಂಬುದನ್ನು ತಿಳಿಸಿ, ಇದರ ಹೊರತಾಗಿಯೂ, ಸರ್ಕಾರವು ವಿವಿಧ ಮಾರಕ ಯೋಜನೆಗಳನ್ನು ನಮ್ಮ ಮೇಲೆ ಹೇರುತ್ತಿದೆ.
ಈ ನಿಟ್ಟಿನಲ್ಲಿ, ನಮ್ಮ ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆಯು ಮತ್ತಷ್ಟು ಯೋಜನೆಗಳ ಭಾರವನ್ನು ಹೊರಲು ಅಸಮರ್ಥವಾಗಿದೆ, ಆದ್ದರಿಂದ, ಪಶ್ಚಿಮ ಘಟ್ಟದ ಧಾರಣಾ ಸಾಮರ್ಥ್ಯದ (Carrying Capacity) ಸಮಗ್ರ ವೈಜ್ಞಾನಿಕ ಅಧ್ಯಯನವು ನಡೆಯಬೇಕು.
ಪರಿಸರ ಸಂರಕ್ಷಣೆಯ ಮಹತ್ಕಾರ್ಯದಲ್ಲಿ ಪೂಜ್ಯ ಸ್ವಾಮೀಜಿ ಯವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಮುನ್ನಡೆಯೋಣ ಎಂದು ಜನತೆಗೆ ಕರೆ ನೀಡಿದರು
ಈ ಮಹತ್ವದ ಸಮಾವೇಶದಲ್ಲಿ ಪರಿಸರ ಹೋರಾಟಗಾರ ಮತ್ತು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಪ್ರಮುಖರಾದ ಶ್ರೀ ಅನಂತ ಹೆಗಡೆ ಆಶೀಸರ ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀ ಶಾಂತಾರಾಮ್ ಸಿದ್ದಿ ಸೇರಿದಂತೆ ಅನೇಕ ಪ್ರಮುಖ ಗಣ್ಯರು ಹಾಗೂ ಪರಿಸರ ಹೋರಾಟಗಾರರು ಉಪಸ್ಥಿತರಿದ್ದರು.
