ಸುದ್ದಿ ಕನ್ನಡ ವಾರ್ತೆ
ಜೊಯಿಡಾ; ಕಾಳಿ ಹುಲಿ ಯೋಜನೆಯಲ್ಲಿ ರೂಪಾಯಿ 152 ಕೋಟಿ ಗೂ ಹೆಚ್ಚು ಹಣದ ಅವ್ಯವಹಾರ ನಡೆದಿದೆ ಎಂಬ ಸುದ್ದಿ,ವಾಹಿನಿ ಯಲ್ಲಿ ನೋಡಿದ ಜೋಯಿಡಾ ನಾಗರಿಕರು, ಈ ಬಗ್ಗೆ ಅಗತ್ಯ ಕ್ರಮ ಕೈಕೊಳ್ಳ ಬೇಕು ತಪ್ಪಿತಸ್ಥರು ಯಾರೇ ಇದ್ದರೂ ಅಗತ್ಯ ಕ್ರಮ ಕೈ ಕೊಳ್ಳಲಿ ಎಂದು ಜಿಲ್ಲಾ ಕುಣುಬಿ ಸಮಾಜದ ಅಧ್ಯಕ್ಷ ಸುಬಾಷ ಗಾವುಡಾ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗಳಿಗೆ ತಹಸೀಲ್ದಾರ್ ಮೂಲಕ ಮನವಿ ನೀಡಿಆಗ್ರಹಿಸಿದ್ದಾರೆ. .ಕಾಳಿ ಹುಲಿ ಯೋಜನೆ ಯಲ್ಲಿ,ಅರಣ್ಯ ಅಧಿಕಾರಿಗಳು ವಿವಿಧ ಯೋಜನೆಯಲ್ಲಿ ಲೂಟಿ ಮಾಡಿದ್ದಾರೆ ಇದರ ಬಗ್ಗೆ ಸಮಗ್ರ ತನಿಖೆ ಮಾಡಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಕರಡಿಗಳಂತ ಕ್ರೂರ ಪ್ರಾಣಿಗಳು ಸ್ಥಳಿಯರ ಮೇಲೆ ದಾಳಿ ಮಾಡುತ್ತಿದ್ದು ಇದನ್ನು ನಿಯಂತ್ರಿಸಲು ಅರಣ್ಯ ಅಧಿಕಾರಿಗಳು ವಿಫಲವಾಗಿದ್ದಾರೆ. ಕ್ರೂರ ಪ್ರಾಣಿಗಳು ಹಾವಳಿ ನಿಯಂತ್ರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ತಹಶಿಲ್ದಾರ ಮೂಲಕ ಕೇಂದ್ರ ಹಾಗೂ ರಾಜ್ಯ ಅರಣ್ಯ ಮಂತ್ರಿಗಳಿಗೆ ಕುಣಬಿ ಸಮಾಜದಿಂದ ಮನವಿ ನೀಡಿದ್ದಾರೆ.
ಕಾಳಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಅಧಿಕಾರಿಗಳು ಶ್ಯಾಮಿಲಾಗಿ ಅವೈಜ್ಞಾನಿಕ ಪ್ಯಾಕೇಜ್ ಆಮಿಷ ನೀಡಿ ಜನರನ್ನು ಕಾಡಿನಿಂದ ಹೊರಗೆ ಹಾಕಲಾಗಿದೆ. ಪ್ಯಾಕೇಜ್ ಪಡೆದ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ನೀಡಲು ವಿಫಲವಾಗಿದೆ. ಅರಣ್ಯ ಹಕ್ಕು ಕಾಯ್ದೆ ಹಾಗೂ ಸಿಎಎಫ್ ನಿಯಮಾವಳಿ 2018 ರ ಉಲ್ಲಂಘನೆ, ಅಕ್ರಮ ಸ್ಥಳಾಂತರ, ಗ್ರಾಮ ಪಂಚಾಯತ್ ಅನುಮತಿ ಪಡೇಯದೇ ಕಾರ್ಯಕ್ರಮ, 1972 ರ ಕಾನೂನು ಉಲ್ಲಂಘಿಸಿದ್ದು, ಕೂಡ ನಡೆದಿದೆ.. ಸಮಾಯಿಕ ಜಮಿನಿನ ಕುಟುಂಬಕ್ಕೆ ಪ್ಯಾಕೇಜ್ ನೀಡಿ ಹಣದ ದುರುಪಯೋಗ, ಪ್ಯಾಕೇಜ್ ಪಡೆದ ಕುಟುಂಬ ಎನ್ ಜಿ ಓ ಗಳ ಮರ್ಜಿಯಿಂದಾಗಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದರೂ ಅಧಿಕಾರಿಗಳು ನಿಷ್ಕಾಳಜಿ ವಹಿಸಿದ್ದಾರೆ. ಪ್ರವಾಸೋದ್ಯಮ ನಡೆಸುವ ಅಧಿಕಾರಿಗಳು ಟೈಗರ್ ಫೌಂಡೇಶನ್ ಮೂಲಕ ಹಣದ ದುರು ಪಯೋಗ ಮಾಡುತ್ತಿದ್ದಾರೆ. ಅಧಿಕಾರಿಗಳ ಮತ್ತು ಶ್ಯಾಮಿಲಾದ ಎನ್ ಜಿ ಓ ಗಳ ಆಸ್ತಿ ತನಿಖೆ ಮಾಡಬೇಕು. ಹೀಗೆ ಅನೇಕ ದೂರುಗಳ ಮನವಿ
ನೀಡಿ. ತನಿಖೆಗೆ ಆಗ್ರಿಹಿಸಲಾಗಿದೆ.
ಕಾಳಿ ಹುಲಿ ಯೋಜನೆ ವ್ಯಾಪ್ತಿಯಲ್ಲಿ ಕರಡಿಗಳಂತ ಕ್ರೂರ ಪ್ರಾಣಿಗಳನ್ನು ತಂದು ಬಿಡಲಾಗಿದೆ. ಸ್ಥಳಿಯರಿಗೆ ಭಯ ಹುಟ್ಟಿಸಿ ಕಾಡಿನಿಂದ ಹೊರಗೆ ಹಾಕುವ ತಂತ್ರ ರೂಪಿಸಿದ್ದಾರೆ, ಮೂಲ ಭೂತ ಸೌಲಭ್ಯ ನೀಡಲು ತೊಂದರೆ ನೀಡಿ ಜನರನ್ನು ಕಾಡಿನಿಂದ ಹೊರಗೆ ಹಾಕುವ ಹುನ್ನಾರ ನಡೆದಿದ್ದು ಈಗಾಗಲೇ ಹಲವಾರು ಜನರ ಮೇಲೆ ಕರಡಿ ಧಾಳಿ ನಡೆದಿದೆ ಇಲ್ಲಿನ ಅಧಿಕಾರಿಗಳು ಕಾಡನ್ನು ಲೂಟಿ ಮಾಡುತ್ತಿದ್ದಾರೆ. ಕಾಡು ಪ್ರಾಣಿಗಳಿಂದ ಬೆಳೆ ಹಾನಿಯಾದರೆ ಪರಿಹಾರ ನೀಡಲುಇಲಾಖೆ ವಿಫಲವಾಗಿದೆ. ಸ್ಥಳೀಯರಿಗೆ ಭದ್ರತೆ ಒದಗಿಸದಿದ್ದರೆ ಉಗ್ರ ಹೋರಾಟ ರೂಪಿಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕುಣುಬಿ ಸಮಾಜದ ಅಧ್ಯಕ್ಷ ಸುಭಾಷ ಗಾವಡಾ, ತಾಲೂಕಾ ಅಧ್ಯಕ್ಷ ಪ್ರೇಮಾನಂದ ವೇಳಿಪ, ಕಾರ್ಯದರ್ಶಿ ಚಂದ್ರಶೇಖರ ಸಾವರಕರ, ಪ್ರಮುಖರಾದ ಮಾಬಳು ಕುಂಡಲಕರ, ಅಜಿತ ಮಿರಾಶಿ, ಪ್ರಸನ್ನ ಗಾವಡಾ, ರಾಮಕೃಷ್ಣ ಪೆಡ್ನೇಕರ, ಸುಭಾಷ ವೇಳಿಪ, ಗಣಪತಿ ಗಾವಡಾ, ದತ್ತಾ ಗಾವಡಾ, ಮುಂತಾದವರು ಇದ್ದರು..