ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ : ಧಾರವಾಡ  ಮೂಲದ ವ್ಯಕ್ತಿಯೊಬ್ಬ ಮಾಗೋಡಿನ ಜೇನುಕಲ್ಲು ಗುಡ್ಡಕ್ಕೆ ಬಂದು ಅಲ್ಲಿ ಗುಡ್ಡದಿಂದ ಪ್ರಪಾತಕ್ಕೆ ಜಿಗಿದು ಆತ್ಮ*ಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ದಾರವಾಡದ ಹೊಸಯಲ್ಲಾಪುರ ಕಂಪ್ಲಿ ಬಸವೇಶ್ವರನಗರದ ಶ್ರೀನಿಧಿ ಕೃಷ್ಣಾ ಕಡಕೋಳ ವಯಸ್ಸು ೨೩ ಎಂಬಾತ ಆತ್ಮ* ಹತ್ಯೆ ಮಾಡಿಕೊಂಡವನಾಗಿದ್ದಾನೆ.ಈತ ಮಾ ೪ ರಂದು ಗೋಕರ್ಣಕ್ಕೆ ಹೋಗಿಬರುವುದಾಗಿ ಹೇಳಿ ಸ್ಕೂಟಿಯಲ್ಲಿ ಹೊರಟಿದ್ದ.ಆದರೆ ಮಾ ೭ ರಂದು ಈತನ ಶವ ಜೇನುಕಲ್ಲುಗುಡ್ಡದಲ್ಲಿ ದೊರೆತಿದೆ.ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಮೃತನ ಶರೀರವನ್ನು ಗುಡ್ಡದಿಂದ ಹೊರತೆಗೆಯಲಾಗಿದೆ.ತಂದೆ ಕೃಷ್ಣ ಶ್ರೀನಿವಾಸ ಕಡಕೋಳ ಬ್ಯಾಂಕ್ ಮೆನೇಜರ್ ದಾರವಾಡ ಇವರು ಪೋಲಿಸ್ ದೂರು ನೀಡಿದ್ದಾರೆ.