ಸುದ್ದಿ ಕನ್ನಡ ವಾರ್ತೆ
ಚಿಕ್ಕೋಡಿ: ಭಗವದ್ಗೀತೆಯು ನಮಗೆ ಆಳವಾದ ಸಂದೇಶ ಕಲಿಸಿದ ಪವಿತ್ತವಾದ ಗೃಂಥವಾಗಿದೆ.ವಸುದೈವ ಕುಟುಂಬದಂತೆ ನಮ್ಮ ದೇಶವಾಗಿದೆ.ಜಗತ್ತೆ ಒಂದು ಕುಟುಂಬ ಎಂದು ಬದಕುವ ನಾವೂ. ಬೇರೆ ಯಾರದೆ ಸಲಹೆ ಅವಶ್ಯಕತೆಯಿಲ್ಲ ಎಂದು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣ ಹೇಳಿದರು.
ತಾಲೂಕಿನ ಯಡೂರ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ಶ್ರೀ ಕಾಡದೇವರ ಮಠ ಶ್ರೀ ಕ್ಷೇತ್ರ ಯಡೂರ ಮಠದಲ್ಲಿ ಮಹಾಕುಂಭಾಭಿಷೇಕ ಹಾಗೂ
ವೀರಶೈವ ಲಿಂಗಾಯತ ಧರ್ಮೋತ್ಥಾನ ಸಮ್ಮೇಳನ ಹಾಗೂ ರಾಜಗೋಪುರಗಳ ಉಧ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು,ಭಾರತವು ಎಲ್ಲಾ ರಂಗಗಳಲ್ಲಿ ಅಭಿವೃದ್ದಿ ಹೊಂದಿದೆ.ಜಾಗತೀಕವಾಗಿ ಭಾರತ ಜಾಗತೀಕವಾಗಿ ಎತ್ತರಕ್ಕೆ ಬೆಳೆದಿದೆ.
ವೀರಶೈವ ಲಿಂಗಾಯತ ಧರ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಕರ್ನಾಟಕ-ಮಹಾರಾಷ್ಟ್ರದಲ್ಲಿ 1 ಕೋಟಿಗೂ ಅಧಿಕ ಜನರಿದ್ದಾರೆ.ವೀರಶೈವ ಲಿಂಗಾಯತ ಮಠಗಳ ಕೊಡುಗೆ ಅಪಾರವಾಗಿದೆ.ಪವಿತ್ರ ಕೃಷ್ಣಾ ನದಿ ತಟದಲ್ಲಿ ವೀರಭದ್ರೇಶ್ವರ ಹಾಗೂ ಕಾಡಸಿದ್ದೇಶ್ವರ ದೇವಸ್ಥಾನ ಇದೆ.ಶಿವ ಪುರಾಣದ ವೀರಭದ್ರೇಶ್ವರ ಮಠದ ಪಾವಿತ್ರ್ಯೆಯತೆಯನ್ನು ಜಗತ್ತಿಗೆ ತಿಳಿಸುವ ಕಾರ್ಯವನ್ನು ಶ್ರೀಗಳು ಮಾಡುತ್ತಿದ್ದಾರೆ ಎಂದರು.
ವಿರಶೈವ ಮಠಗಳು ಸಮಾಜಕ್ಕೆ ಸಾಕಷ್ಟು ಕೊಡುಗೆಯನ್ನು ನೀಡಿವೆ ಎಂದರು.ಯಡೂರ ಕ್ಷೇತ್ರ ಗಡಿಯಲ್ಲಿ ಸಾಮರಸ್ಯ ಹಾಗೂ ಶಾಂತಿ,ಧಾರ್ಮಿಕ,ಸಾಮಾಜಿಕ ಕಾರ್ಯಗಳನ್ನು ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಶ್ರೀಗಳು ಸಮಾಜ ಮುಖೇನ ಕಾರ್ಯ ಮಾಡಿದ್ದಾರೆ ಎಂದರು.ಸಾವಿರಾರು ಭಕ್ತರಿಗೆ ಉಚಿತ ಪ್ರಸಾದ ನೀಡುತ್ತಿದೆ.ವೇದ,ಆಗಮನಗಳನ್ನು ವೀರಭದ್ರೇಶ್ವರ ಹಾಗೂ ಕಾಳಿಕ ಮಠಗಳು ಕಲಿಸುವ ಕಾರ್ಯ ಮಾಡುತ್ತದೆ.ಪ್ರಾಚೀನ ಸಂಪ್ರದಾಯಗಳನ್ನು ಶ್ರೀಮಠ ರಕ್ಷಣೆ ಮಾಡಿಕೊಂಡು ಹೋಗುತ್ತಿದೆ.ವಾರ್ಷಿಕ ಕಲ್ಯಾಣಮಹೋತ್ಸವದಲ್ಲಿ ಮಹಿಳೆಯರಿಂದ ಬೆಳ್ಳಿ ರಥೋಥ್ಸವ ಮಾಡುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾಗಿದೆ ಎಂದರು.ವಿಶ್ವ ಚೇತನ ಪ್ರಶಸ್ತಿ ದೇಶಿಯ ವಿವಿಧ ಗೋವುಗಳನ್ನು ಸಾಕಾಣಿಕೆ ಮಾಡುವ ಮೂಲಕ ಗೋವು ತಳಿಗಳನ್ನು ರಕ್ಷಣೆ ಮಾಡಿಕೊಂಡು ಬರುತ್ತಿರುವದು ಹೆಮ್ಮೆ ಸಂಗತಿಯಾಗಿದೆ ಎಂದರು.
ರಾಜ್ಯಪಾಲ ಥಾವರಚಂದ ಗೇಹ್ಲೋಟ್ ಮಾತನಾಡಿ,ಸಾಂಸ್ಕ್ರತಿಕ ಮತ್ತು ಆಧ್ಯಾತ್ಮಕತೆ ನಮ್ಮ ದೇಶದ ಪರಂಪರೆ ಹೊಂದಿದೆ. ಸಮಾಜ ಈ ಪರಂಪರೆಯಿಂದ ಉದ್ದಾರ ಆಗುತ್ತಿದೆ ಎಂದರು.ದೇವಾಲಯಗಳು ನಮಗೆ ಮಾರ್ಗದರ್ಶಿಗಳಂತೆ ಕಾರ್ಯ ಮಾಡುತ್ತಿದೆ ಎಂದರು. ಭೂಮಿ ಮೇಲಿನ ಎಲ್ಲಾ ಜೀವಿಗಳನ್ನು ರಕ್ಷಣೆ ಮಾಡುವ ಸಂಸ್ಕ್ರತಿ ನಮ್ಮದಾಗಿದೆ.ಸಾವಿರಾರು ವರ್ಷಗಳ ಇತಿಹಾಸವನ್ನು ನಮ್ಮ ಸಂಸ್ಕ್ರತಿ ಹೊಂದಿದೆ ಎಂದರು.ನಮ್ಮ ದೇಶದ ಸಂಸ್ಕತಿಯನ್ನು ಪಾಶ್ಚಿಮಾತ್ಯ ದೇಶಗಳು ಅನುಸರಿಸುತ್ತಿವೆ ಎಂದರು.ದೇಶಕ್ಕಾಗಿ ಸಮಾಜಕ್ಕಾಗಿ ಬದಕುವದನ್ನು ನಮ್ಮ ನಾಡಿನ ಸಂಸ್ಕ್ರತಿಯನ್ನು ಕಲಿಸುತ್ತಿದೆ ಎಂದರು.
ಕಾಶೀ ಮಹಾಪೀಠದ ಶ್ರೀಮತ ಕಾಶೀ ಜ್ಞಾನ ಸಿಂಹಾಸನಾಧೀಶ್ವರ ಶ್ರೀ 1008 ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ,
ಇರಾನ ಇಸ್ರೇಲ್- ಅಮೇರಿಕಾ ನಡುವೆ ನಡೆಯುತ್ತಿರುವ ಯುದ್ದ ನಿಲ್ಲಿಸಲು ಭಾರತ ಮಧ್ಯಪ್ರವೇಶ ಮಾಡಬೇಕು ಎಂದರು.ಯುದ್ದ ನಿಲ್ಲಿಸಿದಲ್ಲಿ ನಮ್ಮ ದೇಶದ ಗೌರವ ಹೆಚ್ಚಾಗುತ್ತದೆ ಎಂದರು.ನಮ್ಮ ದೇಶ ಪ್ರಾಚೀನ ಕಾಲದಿಂದಲೂ ಶಾಂತಿ ಪ್ರತಿಪಾದಿಸುತ್ತಲೇ ಬಂದಿದೆ ಎಂದರು.ದೇಶದಲ್ಲಿ ಏಕರೂಪದ ಕಾನೂನು ಬರಬೇಕಾಗಿದೆ.ಇದರ ಬಗ್ಗೆ ಉಪರಾಷ್ಟ್ರಪತಿಗಳು ಕ್ರಮವಹಿಸಬೇಕು ಎಂದು ಮನವಿ ಮಾಡಿದರು.ಪವಿತ್ರವಾದ ಕೃಷ್ಣಾ ನದಿಯಲ್ಲಿ ಅತಿ ಎತ್ತರದ ವೀರಭದ್ರೇಶ್ವರ ಮೂರ್ತಿಯನ್ನು ಸ್ಥಾಪನೆ ಮಾಡಲಾಗುವದು.ಉಪರಾಷ್ಟ್ರಪತಿಗಳು ಇದಕ್ಕೆ ಸಹಕಾರ ನೀಡಬೇಕು ಎಂದರು.ದಕ್ಷಿಣ ಕಾಶಿ ಎಂದೆ ಶ್ರೀ ಕ್ಷೇತ್ರ ಪ್ರಸಿದ್ದವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹೊಸಪೇಟೆಯ ಹಾಲಕೇರಿ ಕೊಟ್ಟೂರೇಶ್ವರ ಸಂಸ್ಥಾನ ಮಠದ ಶ್ರೀ.ಜಗದ್ಗುರು ಕೊಟ್ಟೂರ ಬಸವಲಿಂಗ ಮಹಾಸ್ವಾಮಿಜಿ,ಶ್ರೀರಂಗಪಟ್ಟಣದ ಬೇಬಿಮಠ ಚಂದ್ರವಣ ಆಶ್ರಮದ ಡಾ.ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮಿಜಿ,ಅಂಬಿಕಾನಗರದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿ ,ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ,ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ ಶೇಟ್ಟರ,
ಪದ್ಮಶ್ರೀ ಪುರಸ್ಕ್ರತ ಡಾ.ಪ್ರಭಾಕರ ಕೋರೆ,ವಿಧಾನ ಪರಿಷತ ಸದಸ್ಯ ಪ್ರಕಾಶ ಹುಕ್ಕೇರಿ,ರಾಜ್ಯಸಭಾ ಸದಸ್ಯ. ಈರಣ್ಣಾ ಕಡಾಡಿ,ಇತರರು ಇದ್ದರು.ಶಾಸಕ ಗಣೇಶ ಹುಕ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರಿಗೆ ವಿಕಾಸ ವೀರ ಪ್ರಶಸ್ತಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತ ಡಾ.ಪ್ರಭಾಕರ ಕೋರೆ ಅವರಿಗೆ ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣ ನೀಡಿ ಗೌರವಿಸಿದರು.
ಉಪರಾಷ್ಟ್ರಪತಿ ಅವರು ಸಹೋದರ-ಸಹೋದರಿಯರೇ ಚನ್ನಾಗಿದ್ದಿರಾ ಎಂದು ಕನ್ನಡದಲ್ಲಿ ಮಾತನಾಡುವ ಮೂಲಕ ಭಾಷಣ ಪ್ರಾರಂಭಿಸಿದರು.
