ಸುದ್ದಿ ಕನ್ನಡ ವಾರ್ತೆ

ಸಿದ್ದಾಪುರ:ತಾಲೂಕಿನ ಅವರಗುಪ್ಪ ಗ್ರಾಮದಲ್ಲಿ ಪತಿ-ಪತ್ನಿ ಕಲಹ ದಿಂದ ಗಲಾಟೆ ಬಿಡಿಸಲು ಬಂದ ಚಿಕ್ಕಪ್ಪನಿಗೆ ಯುವಕರ ಗುಂಪು ಚಾಕು ಇರಿದು ಹತ್ಯೆ ಮಾಡಿದ ಘಟನೆ ನಡೆದಿದ್ದು ಇಬ್ಬರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಸಿದ್ದಾಪುರದಲ್ಲಿ ನಡೆದ ಪತಿ-ಪತ್ನಿ ಕಲಹ ಹತ್ಯೆಗೆ ತಿರುಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಯೋತಿಷಿ ಕಮಲಾಕ‌ರ್ ಭಟ್ ಸೇರಿದಂತೆ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ವಸಂತ ನಾಯ್ಕ (41)ಮೃತ ವ್ಯಕ್ತಿಯಾಗಿದ್ದು ಮಹೇಶ ಹಾಗೂ ಕುಮಾ‌ರ ಇಬ್ಬರಿಗೆ ಗಂಭೀರ ಗಾಯವಾಗಿದ್ದು,ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಸುಚಿತ್ರಾ ಗಂಡನಿಂದ ಬೇರ್ಪಟ್ಟು ಶಿವಮೊಗ್ಗದಲ್ಲಿ ಜ್ಯೋತಿಷಿ ಕಮಲಾಕರ ಭಟ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರ ಮನೆಯಲ್ಲಿಯೇ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸವಾಗಿದ್ದಳು.

ಇನ್ನು ತಾಯಿಗೆ ಜ್ಯೋತಿಷಿ ಕಮಲಾಕರ್ ಭಟ್ ಜೊತೆ ಅಕ್ರಮ ಸಂಬಂಧದ ಬಗ್ಗೆ ಶಂಕೆ ಹೊಂದಿದ್ದ ಮಗಳಿಗೆ ಜ್ಯೋತಿಷಿ ಕಮಲಾಕ‌ರ ಭಟ್ ಹಾಗೂ ಸುಚಿತ್ರ ಕಿರುಕಳು ನೀಡುತಿದ್ದು, ಇದರಿಂದ ಬೇಸತ್ತ ತಾಯಿ ಸುಚಿತ್ರಾಗೆ ತಿಳಿಸದೇ ಸಿದ್ದಾಪುರಕ್ಕೆ ತಂದೆ ಮಹೇಶಗೆ ಕರೆಮಾಡಿ ಚಿಕ್ಕಪ್ಪ ವಸಂತ ಮನೆಗೆ ಬಂದಿದ್ದಳು .ಸುಚಿತ್ರಾ ಮಗಳನ್ನು ಹುಡುಕಿಕೊಂಡು ಜ್ಯೋತಿಷಿ ಕಮಲಾಕರ ಭಟ್ ವಾಹನದಲ್ಲಿ ತಂದೆ ಜೊತೆ ಕೆಲವು ಯುವಕರೊಂದಿಗೆ ಅವರಗುಪ್ಪದ ವಸಂತ ನಾಯ್ಕರವರ ಮನೆಗೆ ಬಂದಿದ್ದು ಆಕೆಯ ಪತಿ ಮಹೇಶ ಕೂಡ ಇದ್ದು ಸುಚಿತ್ರಾ, ಮಹೇಶ ನಡುವೆ ವಾಗ್ವಾದ ನಡೆದಿದೆ.ಈ ಸಂದರ್ಭದಲ್ಲಿ ಜ್ಯೋತಿಷಿ ಕಮಲಾಕರ ಭಟ್ ರವರ ಕಾರನ್ನು ಜಖಂ ಮಾಡಿದ್ದು ಗಲಾಟೆ ತಾರಕಕ್ಕೆ ಹೋಗಿ ಸುಚಿತ್ರಾ ಜೊತೆ ಬಂದಿದ್ದ ಯುವಕರು ಗಲಾಟೆ ಬಿಡಿಸಲು ಮಧ್ಯ ಪ್ರವೇಶಿಸಿದ್ದ ವಸಂತಗೆ ಚಾಕು ಇರಿದಿದ್ದಲ್ಲದೇ ಸುಚಿತ್ರಾ ಪತಿ ಮಹೇಶ ಹಾಗೂ ಪಕ್ಕದ ಮನೆಯ ಕುಮಾರ ಎಂಬುವವರಿಗೂ ಚಾಕು ಇರಿಯಲಾಗಿದೆ.

ವಸಂತ ಆಸ್ಪತ್ರೆ ಮಾರ್ಗದಲ್ಲೇ ಮೃತಪಟ್ಟಿದ್ದು,ಮಹೇಶ ಹಾಗೂ ಕುಮಾ‌ರ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಘಟನೆ ಸಂಬಂಧ ವಸಂತ ಅತ್ತಿಗೆ ಸಂಧ್ಯಾನಾಯ್ಕ ದೂರು ನೀಡಿದ್ದು ಈ ದೂರಿನಾಧಾರದಡಿ ಆರೋಪಿಗಳಾದ ಸುಚಿತ್ರಾ, ಲೋಕನಾಥ್, ಜ್ಯೋತಿಷಿ ಕಮಲಾಕರ ಭಟ್ ಸೇರಿದಂತೆ ಒಟ್ಟು ಏಳು ಜನರನ್ನು ವಶಕ್ಕೆ ಪಡೆದು ತನಿಖೆ ಕೈಗೊಳ್ಳಲಾಗಿದೆ.
ಸ್ಥಳಕ್ಕೆ ಎಸ್.ಪಿ ದೀಪನ್ ರವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹೆಚ್ಚಿನ ಮಾಹಿತಿ ಹೊರಬರಬೇಕಿದೆ.