ಸುದ್ದಿ ಕನ್ನಡ ವಾರ್ತೆ

. ಚಾಮರಾಜನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ನೀಡುವ ಕೆ.ಪಿ.ಚಿಕ್ಕವೀರಯ್ಯ ದತ್ತಿ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕೃಷ್ಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಎಂ. ರಾಜು ಅವರಿಗೆ ಸರ್ಕಾರಿ ನೌಕರರು ಹಾಗೂ E3 ಮೈತ್ರಿ ಬಳಗದ ವತಿಯಿಂದ ಸನ್ಮಾನಿಸಲಾಯಿತು.

ನಂತರ. ಸಿ.ಆರ್.ಪಿ. ರೇಚಣ್ಣ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ವತಿಯಿಂದ ಶಿಕ್ಷಕರಾದ ದಿವಂಗತ ಕೆ.ಪಿ.ಚಿಕ್ಕವೀರಯ್ಯ ರವರ ಸ್ಮರಣಾರ್ಥ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಶ್ರಮಿಸಿದ ಶಿಕ್ಷಕರಿಗೆ ದತ್ತಿ ಪ್ರಶಸ್ತಿ ನೀಡಲಾಗುತ್ತದೆ. 2025ನೇ ಸಾಲಿನಲ್ಲಿ ಹಿರಿಯ ಶಿಕ್ಷಕರಾದ ಎಂ.ರಾಜು ರವರು ಭಾಜನರಾಗಿದ್ದಾರೆ. ರಾಜು ರವರು 1989 ರಲ್ಲಿ ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡಿ, ತಾಲ್ಲೂಕಿನ ಮಲ್ಲಿಗಹಳ್ಳಿ, ಯರಿಯೂರು, ದುಗ್ಗಹಟ್ಟಿ, ಯಳಂದೂರು ಟೌನ್, ಕೃಷ್ಣಾಪುರ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಇಂತಹ ಮಹನೀಯರ ಸೇವೆಯನ್ನು ಶರಣ ಸಾಹಿತ್ಯ ಪರಿಷತ್ ಗುರುತಿಸಿ ಪ್ರಶಸ್ತಿ ಪುರಸ್ಕಾರ ಮಾಡಿರುವುದು ಎಲ್ಲಾ ಶಿಕ್ಷಕರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿ.ಆರ್.ಪಿ. ಸತೀಶ್, ಶಿಕ್ಷಕರಾದ ಬಸವಣ್ಣ, ಜಯಶಂಕರ್, ರಾಜೇಶ್, ವರದರಾಜು, ನಾಗರಾಜು, E3 ಮೈತ್ರಿ ಬಳಗದ ಅಂಬಳೆ ಮಹೇಶ್, ಚೆನ್ನರಾಜ ದಾನವ, ಇರಸವಾಡಿ ಮಹೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು. ವರದಿ. ಎಸ್.ಪುಟ್ಟಸ್ವಾಮಿಹೊನ್ನೂರು. ಸುದ್ದಿ ಕನ್ನಡ ಚಾಮರಾಜನಗರ ಜಿಲ್ಲೆ