ಸುದ್ದಿ ಕನ್ನಡ ವಾರ್ತೆ
ಜೋಯಿಡಾ .. ಇಂದು ಶಾಲೆಗೆ ಹೋದ ಇಬ್ಬರು ಮಕ್ಕಳನ್ನು ಬೈಕ್ ಮೇಲೆ ಅಪಹರಿಸಿಕೊಂಡು ಹೋದ ಮಕ್ಕಳ ಕಳ್ಳ ಜೋಯಿಡಾ ದಲ್ಲಿ ಸಣ್ಣ ಅಪಘಾತ ಮಾಡಿ ಕೊಂಡ ಕಾರಣ ಸಿಕ್ಕಿಬಿದ್ದ,. ಇಂದು ಬೆಳಿಗ್ಗೆ ಧಾರವಾಡ ಜಿಲ್ಲೆಯ ಕನ್ನಡ ಶಾಲೆಯ ವಿದ್ಯಾರ್ಥಿ ಗಳಿಗೆ ಬೈಕ್ ಸವಾರ ನೊಬ್ಬ ನಿಮ್ಮ ಹೆತ್ತವರು ಕರೆಯುತ್ತಿದ್ದಾರೆ ಬನ್ನಿ ಎಂದು ಪುಸಲಾಯಿಸಿ ಮಕ್ಕಳನ್ನು ಅಪಹರಿಸಿ ಕೊಂಡು ಬಂದಿದ್ದ. ಆತನೇ ಅಬ್ದುಲ್ಲ ಕರೀಂ ಮೇಸ್ತ್ರಿ ಎನ್ನುವವ. ಈತನು ಯಾವ ಉದ್ದೇಶಕ್ಕೆ ಮಕ್ಕಳನ್ನು ಕದ್ದಿದ್ದಾನೆ ಎಂದು ಪೊಲೀಸರು ವಿಚಾರಿಸುತ್ತಿದ್ದಾರೆ.
ಈ ಮಕ್ಕಳ ಕಳ್ಳ ಸಂಜೆ ಜೋಯಿಡಾ ಬರುತ್ತಿದಂತೆ ಸಣ್ಣ ಅಪಘಾತ ಮಾಡಿಕೊಂಡ ಕಾರಣ, ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.ಈತನ ಜೊತೆ ಇರುವ ಮಕ್ಕಳನ್ನು ವಿಚಾರಿಸಿದಾಗ ಅಪಹರಣದ ವಿಷಯ ಬೆಳಕಿಗೆ ಬಂದಿದೆ ಈ ಪುಟ್ಟ ಮಕ್ಕಳಿಗೆ ಜೋಯಿಡಾ ಪಿಎಸ್ಐ ಮಹೇಶ ಮಾಳಿ ಆರೈಕೆ ಮಾಡುತ್ತಿದ್ದು ಮಕ್ಕಳು ಆರೋಗ್ಯ ವಾಗಿದ್ದಾರೆ ಮಕ್ಕಳ ಪಾಲಕರು, ಮಕ್ಕಳು ಕಾಣೆಯಾದ ಬಗ್ಗೆ ಆತಂಕಕ್ಕೆ ಒಳಗಾಗಿದ್ದಾರೆ, ಸದ್ಯ ಜೋಯಿಡಾ ಪಿಎಸ್ಐ ಉತ್ತಮ ಕಾರ್ಯ ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರ ರಾಗಿದ್ದಾರೆ.
ಮಕ್ಕಳು ಬೇಗನೇ ಹೆತ್ತವರ ಮಡಿಲು ಸೇರಲಿ ಎಂದು ಸಾರ್ವಜನಿಕ ರು ಹಾರೈಸಿದ್ದಾರೆ, ಮಕ್ಕಳ ಕಳ್ಳನು ಪೊಲೀಸ್ ರ ಸುಪರ್ದಿಯಲ್ಲಿದ್ದು ವಿಚಾರಣೆ ನಡೆಯುತ್ತಿದೆ.
