ಸುದ್ದಿ ಕನ್ನಡ ವಾರ್ತೆ
ಶಿರಸಿ: ಅರ್ಥಶಾಸ್ತ್ರ ವಿಷಯದಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲಾಸಫಿ ಪಿಎಚ್.ಡಿ. ಪದವಿ ದಿವ್ಯಶ್ರೀ ಹೆಗಡೆ ಅವರಿಗೆ ದೊರೆತಿದೆ.

ಸಿಂಡಿಕೇಟ್‌ನ ಅಧಿಕಾರದ ಅಡಿಯಲ್ಲಿ ಮತ್ತು ಪರೀಕ್ಷಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ವಿಶ್ವವಿದ್ಯಾಲಯದ ಕುಲಪತಿಗಳು ಈ ಪ್ರಬಂಧವನ್ನು ಅಧಿಕೃತವಾಗಿ ಅಂಗೀಕರಿಸಿದ್ದಾರೆ.

ದಿವ್ಯಶ್ರೀ ಅವರು ಡಾ. ಎಂ. ವಿ. ದಿನೇಶ ಅವರ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಸ್ವಸಹಾಯ ಗುಂಪುಗಳ ದಕ್ಷತೆಯ ಕುರಿತು ಒಂದು ತುಲನಾತ್ಮಕ ಅಧ್ಯಯನ ಎಂಬ ವಿಷಯದ ಕುರಿತು ಮಹಾಪ್ರಬಂಧವನ್ನು ಸಿದ್ದಪಡಿಸಿ ಸಲ್ಲಿಸಿದ್ದರು. ದಿವ್ಯಶ್ರೀ ಅವರು ಮೈಸೂರು ಘಟಿಕೋತ್ಸವದಲ್ಲಿ ಇವರು ಅಧಿಕೃತವಾಗಿ ರಾಜ್ಯಪಾಲರಿಂದ ಪದವಿ ಸ್ವೀಕರಿಸಿದರು.

ಮತ್ತಿಗಾರಿನ ಪ್ರೊ.ಡಿ.ಜಿ ಹೆಗಡೆ (ಉಡುಪಿ), ಜಯಶ್ರೀ ಅವರ ಪುತ್ರಿಯಾಗಿರುವ ದಿವ್ಯಶ್ರೀ ಅವರು ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನಲ್ಲಿ ಪದವಿ ಶಿಕ್ಷಣ, ಮೈಸೂರಿನಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. ಹಾಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತಿ ವಿಕಾಸ ಹೆಗಡೆ ಅವರ ಪ್ರೋತ್ಸಾಹ, ಮಗಳು ಝರಿಯ ಬೆಂಬಲದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ದಿವ್ಯಶ್ರೀ ಪತ್ರಿಕೆಗೆ ತಿಳಿಸಿದ್ದಾರೆ. ದಿವ್ಯಶ್ರೀ ಅವರು ಅಜ್ಜಿಬಳ ಬಾಳೆಕಾಯಿಜಡ್ಡಿಯ ನಿವಾಸಿ ನಿವೃತ್ತ ಭೂ ಮಾಪನ ಇಲಾಖೆ ಅಧಿಕಾರಿ ಜಿ.ಎಲ್. ಹೆಗಡೆ ಅವರ ಸೊಸೆ. ಇವರ ಸಾಧನೆಗೆ ಮತ್ತಿಗಾರ ಕುಟುಂಬದವರು ಹರ್ಷ ವ್ಯಕ್ತಪಡಿಸಿದ್ದಾರೆ.