ಸುದ್ದಿ ಕನ್ನಡ ವಾರ್ತೆ

ಯಲ್ಲಾಪುರ: ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮೂರನೆಯ ಸೆಮಿಸ್ಟರ್ ಓದುತ್ತಿದ್ದ ಅಂಕೋಲಾ ತಾಲೂಕಿನ ಕಲ್ಲೇಶ್ವರದ ನಿತಿನ್ ರಾಘವೇಂದ್ರ ಭಟ್ (20) ಈತ ತಾನು ಇದ್ದ ರೂಮಿನಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಕಲ್ಲೇಶ್ವರದ ರಾಘವೇಂದ್ರ ಭಟ್ ಹಾಗೂ ಕವಯತ್ರಿ ಸ್ಮಿತಾ ಭಟ್ ರವರ ಪುತ್ರ ನಿತಿನ್ ಈತನೇ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಯ ಕುಟುಂಬಸ್ಥರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.
ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ನಿತಿನ್ ಈತ ಸದಾ ಲವಲವಿಕೆಯಿಂದ ಕೂಡಿರುತ್ತಿದ್ದ ಎನ್ನಲಾಗಿದ್ದು ಈತನ ಸಾವಿನ ಸುದ್ದಿ ತಿಳಿದು ಈತನ ಸಂಬಂಧಿಕರಲ್ಲಿ ಹಾಗೂ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಬೆಂಗಳೂರಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ .

ನಿತಿನ್ ಭಟ್ ಈತ ಓದಿನಲೂ ಕೂಡ ಬುದ್ದಿವಂತ ವಿದ್ಯಾರ್ಥಿಯೇ ಆಗಿದ್ದ ಎನ್ನಲಾಗಿದೆ.