ಸುದ್ದಿ ಕನ್ನಡ ವಾರ್ತೆ
ಉತ್ತರ ಕನ್ನಡ ಜಿಲ್ಲೆಯು ಹಲವು ಪ್ರಸಿದ್ಧ ಧಾರ್ಮಿಕ ಸ್ಥಳ ಹಾಗೂ ಪ್ರವಾಸೋದ್ಯಮಕ್ಕೂ ಕೂಡ ಹೆಸರುವಾಸಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ದೇವಾಲಯಗಳು ಮಠಮಾನ್ಯಗಳು ಭಕ್ತಾದಿಗಳು ಮಾತ್ರವಲ್ಲದೇ ಹೊರ ರಾಜ್ಯದ ಪ್ರವಾಸಿಗರ ಆಕರ್ಷಣೀಯ ಸ್ಥಳವೂ ಆಗಿದೆ.
ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದರೆ ಸಹಸ್ರರು ಈಶ್ವರನ ಲಿಂಗಗಳು ಒಂದೇ ಕಡೆ ಇರುವ ಕ್ಷೇತ್ರವೇ ಸಹಸ್ರಲಿಂಗ ಕ್ಷೇತ್ರವಾಗಿದೆ. ಯಲ್ಲಾಪುರದಿಂದ ಶಿರಸಿ ಮಾರ್ಗವಾಗಿ ಹೊರಟರೆ ಸಹಸ್ರಲಿಂಗ ಎಂಬ ಪ್ರಸಿದ್ಧ ಸ್ಥಳಕ್ಕೆ ಭೇಟಿ ನೀಡಲೇಬೇಕು. ಇಲ್ಲಿಗೆ ಆಗಮಿಸುವ ಭಕ್ತರಿಗೆ ಕಣ್ಮುಂದೆ ಕಾಣುವುದೇ ಸಹಸ್ತ್ರಾರು ಈಶ್ವರ ಲಿಂಗಗಳು ಇರುವ ಶಿವನ ಹೂದೋಟ.
17ನೇ ಶತಮಾನದಲ್ಲಿ ಶಿರಸಿಯನ್ನು ಆಳಿದ ರಾಜ ಸದಾಶಿವರಾಯರು ನಿರ್ಮಿಸಿದರು ಎಂದು ನಂಬಲಾಗಿದೆ.
ಶಾಲ್ಮಲಾ ನದಿಯ ಕಲ್ಲಿನ ಬಂಡೆಗಳ ಮೇಲೆ ಸಾವಿರಾರು ಶಿವಲಿಂಗಗಳು ಮತ್ತು ನಂದಿ ವಿಗ್ರಹಗಳನ್ನು ಕೆತ್ತಲಾಗಿದೆ.
ಕರ್ನಾಟಕದ ಶಿರಸಿಯಲ್ಲಿರುವ ಸಹಸ್ರಲಿಂಗವು 17ನೇ ಶತಮಾನದಲ್ಲಿ ರಾಜ ಸದಾಶಿವರಾಯರು1678-1718 ನಿರ್ಮಿಸಿದ ಸಾವಿರಾರು ಶಿವಲಿಂಗಗಳನ್ನು ಹೊಂದಿರುವ ಯಾತ್ರಾ ಸ್ಥಳವಾಗಿದೆ.
ನೀರಿನ ಮಟ್ಟ ಕಡಿಮೆಯಿದ್ದಾಗ ಈ ಲಿಂಗಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಕೆಲವು ಲಿಂಗಗಳು ಹವಾಮಾನದ ಪರಿಣಾಮದಿಂದ ಹಾನಿಗೊಳಗಾಗಿವೆ..
ಸಹಸ್ರಲಿಂಗಕ್ಕೆ ಶಿವರಾತ್ರಿಯಂದು ಆಗಮಿಸುವ ಭಕ್ತಾದಿಗಳ ಸಂಖ್ಯೆ ಹೆಚ್ಚು. ಇಲ್ಲಿಗೆ ಆಗಮಿಸುವ ಭಕ್ತರು ಇಲ್ಲಿರುವ ಈಶ್ವರ ಲಿಂಗಕ್ಕೆ ಅಭಿಷೇಕ ಪೂಜೆ ನೆರವೇರಿಸುತ್ತಾರೆ. ಇಲ್ಲಿ ಸಹಸ್ರಾರು ಈಶ್ವರ ಲಿಂಗಗಳು ಇದ್ದರೂ ಕೂಡ ಮಹಾಶಿವರಾತ್ರಿ ಎಂದು ಬಹುತೇಕ ಈಶ್ವರ ಲಿಂಗದ ಮುಂದೆ ಕುಳಿತು ಭಕ್ತರು ಪೂಜೆ ಸಲ್ಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿರುತ್ತದೆ. ಇಷ್ಟೊಂದು ಸಂಖ್ಯೆಯಲ್ಲಿ ಇಲ್ಲಿಗೆ ಅಂದು ಭಕ್ತಾದಿಗಳು ಆಗಮಿಸುತ್ತಾರೆ.
