ಸುದ್ದಿ ಕನ್ನಡ ವಾರ್ತೆ

ಜೊಯಿಡಾ; ತಾಲ್ಲೂಕು ಕೇಂದ್ರದಿಂದ ಹಳಿಯಾಳ ಶಾಸಕರ ಕಚೇರಿ ತನಕ ಕರ್ನಾಟಕ ಪ್ರಾಂತ ರೈತ ಸಂಘದಿಂದ ವಿವಿಧ ಸಮಸ್ಯೆಗಳಿಗೆ ಪರಿಹರಿಸುವಂತೆ ಕೈಗೊಂಡ ಪಾದಯಾತ್ರೆಯನ್ನು ರಾಜ್ಯ ಉಪಾಧ್ಯಕ್ಷ ಟಿ.ಯಶವಂತ ಉದ್ಘಾಟಿಸಿದರು. ಡಿಸೆಂಬರ್ 20 ರಂದು ಹಳಿಯಾಳದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಮತ್ತು ಹೋರಾಟಗಾರರ ಸಭೆ ಕರೆದಿದ್ದ ಬಗ್ಗೆ ಲಿಖಿತ ಪತ್ರ ನೀಡಿದ್ದರಿಂದ ಪಾದಯಾತ್ರೆ ಹಿಂದಕ್ಕೆ ಪಡೆಯಲಾಗಿದೆ.

ಜೊಯಿಡಾ ತಾಲ್ಲೂಕಿನ ರಸ್ತೆ, ಸೇತುವೆ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಹುಲಿ ಯೋಜನೆಯ ಸ್ವ ಇಚ್ಚಾ ಪ್ಯಾಕೇಜ್ ರದ್ದು ಪಡಿಸುವುದು. ಗ್ರಾಮಿಣ ಭಾಗದಲ್ಲಿ ಬಸ್ ಸೌಲಭ್ಯ ಅತಿಕ್ರಮಣ ಮಂಜೂರು, ಹಿಗೆ ವಿವಿಧ ಸಮಸ್ಯೆ ಗಳಿಗೆ ಶಾಸ್ವತ ಪರಿಹಾರ ಕಲ್ಪಿಸಲು ಕಳೆದ 25 ವರ್ಷ ಗಳಿಂದ ಕರ್ನಾಟಕ ಪ್ರಾಂತ ರೈತ ಸಂಘ ಹೋರಾಟ ಮಾಡಿದರೂ ಪ್ರಯೋಜನವಿಲ್ಲ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಸರ್ಕಾರದ ಗಮನ ಸೆಳೆಯಲು ಈ ಪಾದಯಾತ್ರೆ ಉದ್ದೇಶವಾಗಿತ್ತು.

ಡಿಸೆಂಬರ್ 20 ಸಭೆ.

ಶಾಸಕರಾದ ಆರ್ ವಿ ದೇಶಪಾಂಡೆ ರವರು ಡಿಸೆಂಬರ್ 20 ಹಳಿಯಾಳ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರ ಸಭೆ ಕರೆದಿರುವುದಾಗಿ ಜೊಯಿಡಾ ತಹಶಿಲ್ದಾರ ಮೂಲಕ ಲಿಖಿತ ಪತ್ರ ನಿಡಿದ್ದಾರೆ.

ಮುಖ್ಯ ಕೇಂದ್ರದಲ್ಲಿ ಮೆರವಣಿಗೆ

ತಹಶಿಲ್ದಾರ ಕಚೇರಿಯಿಂದ ಶಿವಾಜಿ ವೃತ್ತ ತನಕ ಕರ್ನಾಟಕ ಪ್ರಾಂತ ರೈತ ಸಂಘದ ಮೆರವಣಿಗೆ ನಡೆಯಿತು. ಅನೇಕ ಬೇಡಿಕೆಗಳನ್ನು ಪೂರೈಸಲು ಘೋಷಣೆ ಕೂಗಲಾಯಿತು.

ಪಾದಯಾತ್ರೆಯಲ್ಲಿ ಟಿ.ಯಶವಂತ ಕೆಪಿಆರ ಎಸ್ ಉಪಾಧ್ಯಕ್ಷ, ಶ್ಯಾಮನಾಥ ನಾಯ್ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಯಮುನಾ ಗಾಂವ್ಕರ್ ಸಿ.ಐ ಟಿ ಯು ಕಾರ್ಯದರ್ಶಿ, ಪ್ರೇಮಾನಂದ ವೇಳಿಪ ಅಧ್ಯಕ್ಷ, ಮಾಬಳು ಕುಂಡಲಕರ, ದಯಾನಂದ ಕುಮಾಗಾಳಕರ, ಉಮೇಶ್ ವೆಳಿಪ, ಮುಂತಾದವರು ಇದ್ದರು.