ಸುದ್ಧಿಕನ್ನಡ ವಾರ್ತೆ
Goa: ಗೋವಾ ಬ್ರಾಹ್ಮಣ ಸಂಘದ ವತಿಯಿಂದ ಜನವರಿ 8 ಮತ್ತು 9 ರಂದು ಪಣಜಿ ಸಮೀಪೊದ ತಾಲಿಗಾಂವನ ಶ್ರೀ ಕ್ಷೇತ್ರಪಾಲ ದಾಮೋದರ ಸಂಸ್ಥಾನ ದುರ್ಗಾವಾಡಿಯಲ್ಲಿ “ಲೋಕಕಲ್ಯಾಣಾರ್ಥವಾಗಿ” ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿತು.

ಜನವರಿ 8 ರಂದು ರುದ್ರಪಠಣ ಮತ್ತು ಗಣಹವನ, ಜನವರಿ 9 ರಂದು ಮಹಾರುದ್ರ ಹವನ ಮತ್ತು ಮಾತೆಯರಿಂದ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ ನೆರವೇರಿಸಲಾಯಿತು.

ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗೋವಾದ ವಿವಿಧ ಭಾಗಗಳಿಂದ ಹವ್ಯಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಕರ್ನಾಟಕದ ವಿವಿದೆಡೆಯಿಂದ ಆಗಮಿಸಿದ್ದ ಹಿರಿಯ ವೈದಿಕರ ಅಧ್ವೈರ್ಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಗೋವಾ ಬ್ರಾಹ್ಮಣ ಸಂಘದಿಂದ ಪ್ರತಿ ವರ್ಷ ಗೋವಾದ ವಿವಿದೆಡೆ ಲೋಕಕಣ್ಯಾಣಾರ್ಥವಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬರಲಾಗುತ್ತಿದ್ದು, ಪ್ರಸಕ್ತ 12ನೇಯ ವರ್ಷದ ಕಾರ್ಯಕ್ರಮವಾಗಿದೆ.