ಯಲ್ಲಾಪುರ ಆ೨೦ ಃ ಯಾರದ್ದೋ ಒತ್ತಡಕ್ಕೆ ಮಣಿದು ಇಲ್ಲಿಯ ಪೋಲಿಸರು ಪ.ಪಂ ಸದಸ್ಯ  ಉಪಾಧ್ಯಕ್ಷ ಹುದ್ದೆಯ ಆಕಾಂಕ್ಷಿ ಸೋಮೇಶ್ವರ ನಾಯ್ಕ್ ಮೇಲೆ ಸೊ ಮೊಟ್ಟೋ ಪ್ರಕರಣ ಧಾಖಲಿಸಿ ಅವರು ಚುನಾವಣೆಗೆ ಬಾರದಂತೆ ಭಯ ಹುಟ್ಟಿಸಿದ ಕ್ರಮವನ್ನು ಬಿಜೆಪಿ ಖಂಡಿಸುತ್ತದೆ.ಮತ್ತು ಅಧಿಕಾರ ದುರುಪಯೋಗ ಮಾಡಿದ ಪೋಲಿಸ್ ಇಲಾಖೆ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಹೇಳಿದರು.
ಅವರು  ಮಂಗಳವಾರ ಸಂಜೆ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಿಜೆಪಿಯ ಐವರು ಸದಸ್ಯರ ಜೊತೆಗೆ ಹಲವರು ನಮಗೆ ಬೆಂಬಲ ನೀಡುವದಕ್ಕೆ ಮುಂದಾಗಿದ್ದರು.ಈ ಹಿನ್ನೆಲೆಯಲ್ಲಿ ಸೋಮೇಶ್ವರ ನಾಯ್ಕ್ ಮೇಲೆ ಮೊಬೈಲ್ ಸ್ಟೇಟಸ್ ಗೆ ಸಂಬಂದಿಸಿದ ಹೇಳಿಕೆಯ ಮೇಲೆ ಅವರ ಮೇಲೆ ಪೋಲಿಸರು ಪ್ರಕರಣ ಧಾಖಲಿಸುವಂತೆ ಕುಮ್ಮಕ್ಕನ್ನು ಪೋಲಿಸರಿಗೆ ನೀಡಿದ್ದಾರೆ.ಇದರಿಂದ ಭಯಗೊಂಡ ಸೋಮೇಶ್ವರ ನಾಪತ್ತೆಯಾಗಿದ್ದಾರೋ ಇಲ್ಲವೋ ಅವರನ್ನು ಅಪಹರಿಸಲಾಗಿದೆಯೋ ತಿಳಿಯುತ್ತಿಲ್ಲ.ಒಂದು ಚುನಾವಣೆಯ ಈ ಕಾಲಕ್ಕೆ ಈ ತರಹ ಅಧಿಕಾರ ದುರುಪಯೋಗ ನೀತಿ ಮತ್ತು ಭಯ ಹುಟ್ಟಿಸುವ ಸ್ಥಿತಿ ನಿರ್ಮಿಸಿದ್ದು ನಮಗೆ ನೋವಾಗಿದೆ.ಬಿಜೆಪಿಯಿಂದ ಆಯ್ಕೆಯಾದ ಸದಸ್ಯರುಗಳು ಬುಧವಾರ ನಡೆಯುವ  ಪ.ಪಂ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ರಾಮು ನಾಯ್ಕ ಮಾತನಾಡಿ ಇದೊಂದು ಘಟನೆ ಕಪ್ಪುಚುಕ್ಕೆ.ನಾವೆಲ್ಲ ಒಟ್ಟಾದ ಬಳಿಕ ಮಾಡಿದ ಹುನ್ನಾರ.ಯಾರದೋ ಒತ್ತಡಕ್ಕೆ ಒಳಗಾಗಿ ಪೋಲಿಸರು ಮಾಡಿದ ಕೃತ್ಯ ಇದಾಗಿದ್ದು ಸೋಮೇಶ್ವರ  ಜೀವಭಯದಿಂದ ನಾಪತ್ತೆಯಾದಂತಿದೆ.ಮುಂದಿನ ತೊಂದರೆಗೆ ಪೋಲಿಸರೇ ಹೊಣೆಯಾಗಬೇಕಾಗುತ್ತದೆ.
ಪಕ್ಷದ ಹಿರಿಯರಾದ , ಉಮೇಶ ಭಾಗ್ವತ್ ಕಳಚೆ,ಗೋಪಾಲಕೃಷ್ಣ ಗಾಂವ್ಕಾರ್, ಪ.ಪಂ. ಸದಸ್ಯರಾದ ಶ್ಯಾಮಿಲಿ ಪಾಟನಕರ್, ಕಲ್ಪನಾ ನಾಯ್ಕ, ಆದಿತ್ಯ ಗುಡಿಗಾರ್, ಪ್ರಮುಖರಾದ ಗಣಪತಿ ಮುದ್ದೇಪಾಲ್, ಪ್ರದೀಪ್ ಯಲ್ಲಾಪುರಕರ್,ಗಜಾನನ ನಾಯ್ಕ,ವಿಜಯಕುಮಾರ್ ಆಚಾರಿ ಉಪಸ್ಥಿತರಿಸ್ದರು.