ಶಿರಸಿ: ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಲ್ಲಿ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಪ್ರಧಾನ ಮಂತ್ರಿಗಳ ವಿಪತ್ತು ನಿಧಿಯಿಂದ ತಲಾ ೨ ಲ.ರೂ ನೀಡಲು ಭಾರತ ಸರಕಾರದ ಅಧೀನ ಕಾರ್ಯದರ್ಶಿ ಪ್ರದೀಪ ಕುಮಾರ ಶ್ರೀವಾತ್ಸವ ಆದೇಶ ಮಾಡಿದ್ದಾರೆ.
ಅತಿ‌ ಮಳೆಗೆ ಅಂಕೋಲಾ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ  ಹಾಗೂ ಸಾವು‌ ನೋವು ಸಂಬಂಧಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಧಾನ ಮಂತ್ರಿಗಳ ಗಮನ ಸೆಳೆದು ಸಂಸತ್ತಿನ ಅಧಿವೇಶನದಲ್ಲೂ ಆರ್ಥಿಕ ಸಾಂತ್ವನದ ನೆರವಿಗೆ ಒತ್ತಾಯಿಸಿದ್ದರು.
 ಇದೀಗ ಭಾರತ ಸರಕಾರವು ಮೃತ ವ್ಯಕ್ತಿ ಕುಟುಂಬಕ್ಕೆ ೨ ಲ.ರೂ. ಹಾಗೂ ತೀವ್ರವಾಗಿ ಗಾಯಗೊಂಡವರಿಗೆ ತಲಾ ೫೦ ಸಾ.ರೂ. ನೆರವು ಒದಗಿಸಲು ಆದೇಶ ಮಾಡಿದೆ.