ಶಿರಸಿ: ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಶಾಖೆಯ ಕನ್ನಡ ವೈದ್ಯ ಬರಹಗಾರರ ಸಂಘವು ವೈದ್ಯರಿಗಾಗಿ ನಡೆಸಿದ ಸಣ್ಣ ಕಥೆಗಳ ಸ್ಪರ್ಧೆಯಲ್ಲಿ ಡಾ. ತನುಶ್ರೀ ಹೆಗಡೆಯವರು ಪ್ರಥಮ ಸ್ಥಾನ ಪಡೆದಿದ್ದಾರೆ.
ಬೆಳಗಾವಿಯ ಕೆ ಎಲ್ ಇ ಆಗಸ್ಟ್ ೨೫ರಂದು ನಡೆದ ಕನ್ನಡ ವೈದ್ಯ ಬರಹಗಾರರ ಸಮ್ಮೇಳನದಲ್ಲಿ ಸರ್ವಧ್ಯಕ್ಷರಾದ ಡಾ.ನಾ.ಸೋಮೇಶ್ವರ್ ರವರು ಬಹುಮಾನ ವಿತರಣೆ ಮಾಡಿದರು. ತನುಶ್ರೀ ಹೆಗಡೆ ನಗರದ ಗಣೇಶ ನೇತ್ರಾಲಯದಲ್ಲಿ ವೈದ್ಯೆಯಾಗಿದ್ದು, ಕಾವ್ಯ ರಚನೆ, ನಾಟಕ ರಚನೆಗಳಲ್ಲೂ ಆಸಕ್ತಿ ಹೊಂದಿದವರಾಗಿದ್ದಾರೆ.
ಭಾರತೀಯ ವೈದ್ಯಕೀಯ ಸಂಘದ ಶಿರಸಿ ಶಾಖೆಯ ಅಧ್ಯಕ್ಷ ಡಾ. ಮಧುಕೇಶ್ವರ್ ಜಿ.ವಿ.ಮತ್ತು ಎಲ್ಲ ಸದಸ್ಯರೂ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಶಿರಸಿ ಐಎಂಎ ಕನ್ನಡ ಬಳಗದ ಮುಖ್ಯಸ್ಥ ಡಾ.ಶಿವರಾಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.