ಕುಷ್ಠಗಿ: ಕುಷ್ಠಗಿ ತಾಲೂಕಿನ ಎಂ.ಗುಡದೂರು ಗ್ರಾಮದಲ್ಲಿ ವಿಷ ಅಣಬೆ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ನಡೆದಿದೆ.
ಎಂ.ಗುಡದೂರು ಗ್ರಾಮದ ಅಕ್ಕ್ಮ ಔತೇದಾರ, ಸೋಮವ್ವ ದೋಟಿಹಾಳ, ಗಂಗವ್ವ ಕುರಿ, ಶಿಲ್ಪಾ ಔತೇದಾರ, ಶಿವಮ್ಮ ಗುಂಡಿಹಿಂದಲ್, ವಿಷ ಅಣಬೆ ಸೇವಿಸಿ ಅಸ್ವಸ್ಥರಾದ ಕೃಷಿ ಕಾರ್ಮಿಕರಾಗಿದ್ದಾರೆ.

ಶಾಖಾಪುರ ಗ್ರಾಮದ ಮುತ್ತನಗೌಡ ಪೋಲಿಸ್ ಪಾಟೀಲ್ ರವರ ಜಮೀನಿನಲ್ಲಿ ಕೂಲಿ ಕೆಲಸ ಮಾಡುವಾಗ ವಿಷ ಅಣಬೆ ಕಂಡುಂದಿದ್ದು ಇದನ್ನು ಸೇವಿಸಿ ಅಸ್ವಸ್ಥರಾಗಿದ್ದಾರೆ. ಇವರನ್ನು ಕೂಡಲೇ ಸರ್ಕಾರಿ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.