ಪಣಜಿ: ಗೋವಾದ ಕಾಣಕೋಣ ದಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. 22 ವರ್ಷದ ಯುವಕನ ಮೃತದೇಹ ಲೋಲಾಯ ರೈಲ್ವೆ ಸುರಂಗದಲ್ಲಿ ಪತ್ತೆಯಾಗಿದೆ. ಈ ಯುವಕನ ಹೆಸರು ಯಶ್ದೀಪ್ ಪಾಗಿ (22) ಆಗಿದ್ದು, ರೈಲು ಡಿಕ್ಕಿಯಾಗಿ ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ಅಂದಾಜಿಸಲಾಗಿದೆ.

ಈ ಸುರಂಗದಲ್ಲಿ ಯಶ್ದೀಪ್ ಏನು ಮಾಡುತ್ತಿದ್ದ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಪೋಲಿಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.