ಸುದ್ದಿ ಕನ್ನಡ ವಾರ್ತೆ
ಶಿರಸಿ: ಗಾಂಜಾ ಮಾದಕ ವಸ್ತು ಸೇವಿಸಿದ ಬಗ್ಗೆ ವೈಧ್ಯಕೀಯ ಪರೀಕ್ಷೆ ದೃಢಪಟ್ಟ ಹಿನ್ನಲೆಯಲ್ಲಿ ಶಿರಸಿ ನಗರ ಪೊಲೀಸರು ಇಂದು ಇಬ್ಬರನ್ನು ಬಂಧಿಸಿದ ಘಟನೆ ಜರುಗಿದೆ.
ಶಿರಸಿಯ ಗಣೇಶನಗರ ನಿವಾಸಿಯಾದ ಕಿರಣಕುಮಾರ ಸುಭಾಷ ಜೋಗಳೆಕರ್ ಮತ್ತು ಅರೆಕೊಪ್ಪದ ನಿವಾಸಿ ರಕ್ಷಿತ್ ರಾಮು ಬೆಳಗಾಂ ಬಂಧಿತ ವ್ಯಕ್ತಿಗಳಾಗಿದ್ದಾರೆ.
ಇರ್ವರು ಶಿರಸಿ ನಗರದ ಜೂ ಸರ್ಕಲ್ ಹತ್ತಿರದ ಆನೆಹೊಂಡ ಕೆರೆ ದಡದಲ್ಲಿ ಗಾಂಜಾ ಅಮಲು ಪಧಾರ್ಥ ಸೇವನೆ ಮಾಡಿರುವ ಸಂಶಯದ ಮೇಲೆ ವಶಕ್ಕೆ ಪಡೆದು ನಗರದ ಪಂಡೀತ ಸಾರ್ವಜನಿಕ ಆಸ್ಪತ್ರೆ ಯಲ್ಲಿ ವೈಧ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು,ಇರ್ವರು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದರಿಂದ ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಎಂ ನಾರಾಯಣ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಿ ಕೃಷ್ಣಮೂರ್ತಿ, ಜಗದೀಶ ಎಂ, ಹಾಗೂ ಶಿರಸಿ ಉಪವಿಭಾಗದ ಡಿಎಸ್ಪಿ ಗಣೇಶ ಕೆ.ಎಲ್ ,ವೃತ್ತ ನಿರೀಕ್ಷಕ ಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ಶಿರಸಿ ನಗರ ಪೊಲೀಸ್ ಠಾಣೆ ಪಿಎಸ್ಐ ನಾಗಪ್ಪ.ಬಿ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಎಸ್ಐ ನಾರಾಯಣ ರಾಠೋಡ್, ಹನುಮಂತ ಕಬಾಡಿ, ಸತೀಶ್ ಅಂಬಿಗ,
ಸದ್ದಾಂ ಹುಸೇನ್,
ಮಲ್ಲಿಕಾರ್ಜುನ ಕುದರಿ,
ಶಿವಲಿಂಗ ತುಪ್ಪದ, ರಾಜಶೇಖರ ಅಂಗಡಿರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು