ಸುದ್ದಿ ಕನ್ನಡ ವಾರ್ತೆ

ಜೊಯಿಡಾ : ತಾಲೂಕಿನ ಮೊದಲ ಜಾತ್ರೆ ಗಾವಡೆ ವಾಡದ ಜನಪ್ರಿಯ ಖಾಪ್ರಿ ಜಾತ್ರೆ ಬುಡಕಟ್ಟು ಕುಣುಬಿ ಗಳ ವಿಧಿವಿಧಾನಗಳೊಂದಿಗೆಭಕ್ತರ ಜಯ ಘೋಷಣೆ ಗಳೊಂದಿಗೆ ಸಂಪನ್ನಗೊಂಡಿತು ಸಾವಿರಾರು ಜನರು ಭಕ್ತಿಯಿಂದ ತಮ್ಮ ಹರಕೆ ಪೂರೈಸಿ ಸಂತುಷ್ಠ ರಾದರು.

ರವಿವಾರ ರಾತ್ರಿ ಗಾವಡೆ ವಾಡದ ಬುದವಂತ ನ ಮನೆ ಅಂಗಳ, ಜಾತ್ರೆ ನಡೆಯುವ ಸ್ಥಳದಲ್ಲಿ ಆಲಂಕರಿಸಿದ ತುಳಸಿ ಕಟ್ಟೆ ಯಲ್ಲಿ ತುಳಸಿ ವಿವಾಹ ನಡೆಯುತ್ತದೆ, ಆ ವೇಳೆಗೆ ನೂರಾರು ಭಕ್ತರು ಬಂದು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ, ನಂತರ ವಿವಿಧ ಸಂಗೀತ, ಕಾರ್ಯಕ್ರಮಗಳು ರಾತ್ರಿ ಎಲ್ಲ ನಡೆಯುತ್ತವೆ ಜಾಗರಣೆ ಯ ನಂತರ ಬೆಳಿಗ್ಗೆ ಜಾತ್ರೆ ಯ ವಿಧಿ ವಿಧಾನ ಗಳು ನಡೆಯುತ್ತವೆ, ಬೆಳಿಗ್ಗೆ 10 ಗಂಟೆಯಿಂದ ಮತ್ತೆ ಬುದವಂತ ನ ನೇತೃತ್ವದಲ್ಲಿ ಬುಡಕಟ್ಟು ಸಂಗೀತ ಗಳು ಆರಂಭ ವಾಗಿ ಖಾಪ್ರಿ ದೇವತೆ ಗಳು ಸೇರಿಕೊಂಡು ತುಳಸಿ ಕಟ್ಟೆಯ ಸುತ್ತ ಪ್ರದಕ್ಷಿಣೆ ಹಾಕುತ್ತವೆ ಸೇರಿದ ಜನತೆಗೆ ದರ್ಶನ ನೀಡುತ್ತವೆ.

ಈ ನಡುವೆ ಪೂಜೆಗಳು ನಡೆದು ಭಕ್ತರುಹಣ್ಣು ತೆಂಗಿನಕಾಯಿ ಗಳನ್ನು ಹರಕೆ ಹೊತ್ತ ಕಂಬಳಿ ಗಳನ್ನುದೇವರಿಗೆ ಅರ್ಪಿಸುತ್ತಾರೆ, ಇಂತ ಸಾವಿರಾರು ಕಂಬಳಿ ಗಳು ಹರಕೆ ಹೊತ್ತ ಭಕ್ತ ರಿಂದ ಬಂದವು, ದೇವರ ಪ್ರಸಾದ ವಿತರಣೆ ಪೂಜೆ ಮದ್ಯಾಹ್ನ ದ ನಂತರವೂ ನಡೆದವು.
ವಿವಿಧ ಸಾಮಗ್ರಿಗಳು ಪಾನಿಯ ಗಳು ಬಟ್ಟೆಗಳು ಸೇರಿದಂತೆ ಹಲವಾರು ಮಿಠಾಯಿ ಅಂಗಡಿಗಳು ಜನರಿಗೆ ಸಮಯ ಕಳೆಯಲು ಸಹಕಾರಿ ಯಾದವು,ಜಾತ್ರೆ ರಾತ್ರಿಯ ವರೆಗೂ ನಡೆಯುತ್ತದೆ.

ವ್ಯಾಪಾರಿಗಳು ಅಂಗಡಿ ಮುಂಗಟ್ಟು ಗಳನ್ನು
ತೆರವುಮಾಡಿದ ಮೇಲೆ ಮುಗಿಯುತ್ತದೆ.
ತಾಲೂಕಿನ ಬೇರೆ ಬೇರೆ ಬಾಗದ ಜನರುಬೇರೆ ತಾಲೂಕಿನ, ಜಿಲ್ಲೆಯ ವಿವಿಡೆದೆ ಯಿಂದ, ಗೋವಾ ದಿಂದ ಬಂದ ಭಕ್ತರು ಹರಕೆ ತೀರಿಸಿ ಕೃತಾರ್ಥರಾದರು.