ಕನ್ನಡ ವಾರ್ತೆ
ಮಹಾ ಕುಂಭಮೇಳದ ನಾಗೇಶ್ವರ್ ಘಾಟ್ ನಲ್ಲಿ ನಿರ್ಮಿಸಲಾಗಿದ್ದ ಟೆಂಟ್ ಸಿಟಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಟೆಂಟ್ಗಳು ಸುಟ್ಟು ಬಸ್ಮವಾದ ಘಟನೆ ನಡೆದಿದೆ.
ಕುಂಭಮೇಳಕ್ಕಾಗಿ ನಿರ್ಮಿಸಲಾಗಿದ್ದ ಪ್ರಯಾಗ್ ರಾಜ್ ನ ಹಲವು ಟೆಂಟುಗಳು ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಸೆಕ್ಷನ್ 22ರ ನಾಗೇಶ್ವರ ಘಾಟ್ ನಲ್ಲಿ ನಿರ್ಮಿಸಲಾಗಿದ್ದ ಟೆಂಟ್ ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು.
ಅಗ್ನಿಶಾಮಕ ದಳಕ್ಕೆ ಮಾಹಿತಿ ಲಭ್ಯವಾಗಿ ಸ್ಥಳಕ್ಕೆ ಬರುವ ಮೊದಲೇ ಈ ಬೆಂಕಿಯು ಹಲವು ಟೆಂಟ್ ಗಳಿಗೆ ಆವರಿಸಿತ್ತು.