ಸುದ್ಧಿಕನ್ನಡ ವಾರ್ತೆ
ಪ್ರಯಾಗರಾಜ್: ಉತ್ತರಭಾರತದ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಯನ್ನು ಮಾರಾಟ ಮಾಡುತ್ತಿರುವ ಮೊನಾಲಿಸಾ ಎಂಬ ಹುಡುಗಿಯ ಕಣ್ಣುಗಳನ್ನು ಕಂಡು ಇಲ್ಲಿ ಆಗಮಿಸುತ್ತಿರುವ ಜನರು ಫಿದಾ ಆಗಿದ್ದಾರೆ. ಈಕೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೊನಾಲಿಸಾ ಎಂಬ ಈ ಹುಡುಗಿಯು ಸದ್ಯ ಸ್ಟಾರ್ ಆಗಿ ಮಿಂಚಿದ್ದಾಳೆ. ಸಾದಾರಣ ಹುಡುಗಿ ಇಂದು ಸ್ಟಾರ್ ಆಗಿ ಮಿಂಚಿದ್ದಾಳೆ. ವಿದೇಶಿಗರು ಕೂಡ ಈಕೆಯನ್ನು ಮಾತನಾಡಿಸಿ ಹೋಗುತ್ತಿದ್ದಾರೆ.