ಸುದ್ದಿಕನ್ನಡ ವಾರ್ತೆ
ಶ್ರೀನಗರ: ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಉಡಾವಣಾ ಪ್ಯಾಡ್‍ಗಳ ಮೇಲೆ ಮಂಗಳವಾರ ಮಧ್ಯರಾತ್ರಿ ಭಾರತೀಯ ವಾಯುಪಡೆ ಭಾರೀ ವಾಯುದಾಳಿ ನಡೆಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೂರು ಯುದ್ಧ ವಿಮಾನಗಳು ಪತನಗೊಂಡ ಘಟನೆಗಳು ಬೆಳಕಿಗೆ ಬಂದಿವೆ, ಅವುಗಳಲ್ಲಿ ಒಂದು ಪುಲ್ವಾಮಾದ ಪ್ಯಾಂಪೆÇೀರ್ ಪ್ರದೇಶದಲ್ಲಿದೆ. ಉಳಿದ ಎರಡು ಘಟನೆಗಳು ಅಖ್ನೂರ್ ಮತ್ತು ರಾಂಬನ್ ಪ್ರದೇಶಗಳಲ್ಲಿ ನಡೆದಿವೆ ಎಂದು ಹೇಳಲಾಗುತ್ತದೆ.

 

ಭಾರತ ನಿರ್ಮಿತ ‘ಆಕಾಶ್’ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಚೀನಾ ನಿರ್ಮಿತ ಜೆಎಫ್-17 ಥಂಡರ್ ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂಬ ಮಾಹಿತಿ ಹೊರಬಿದ್ದಿದೆ. ಭಾರತವು ಜಾರಿಗೆ ತಂದ ಆಪರೇಷನ್ ಸಿಂಧೂರ್ ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಸಕಾಲದಲ್ಲಿ ಜೆಟ್‍ನಿಂದ ಹೊರಬರಲು ಸಾಧ್ಯವಾಗದೆ ಪಾಕಿಸ್ತಾನಿ ಪೈಲಟ್ ಸಾವನ್ನಪ್ಪಿದ್ದಾರೆ ಎಂಬ ವರದಿಗಳೂ ಬಂದಿವೆ, ಆದರೆ ಇದು ಇನ್ನೂ ದೃಢಪಟ್ಟಿಲ್ಲ.

 

ಈ ಘಟನೆಗೆ ಸಂಬಂಧಿಸಿದ ಕೆಲವು ಛಾಯಾಚಿತ್ರಗಳು ಹೊರಬಂದಿವೆ ಮತ್ತು ಅವುಗಳನ್ನು ಭಾರತೀಯ ವಾಯುಪಡೆಯ ನಿವೃತ್ತ ಅಧಿಕಾರಿಗಳಿಗೆ ತೋರಿಸಲಾಗಿದೆ. ಅವರು ಒದಗಿಸಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತಕ್ಕೀಡಾದ ಫೈಟರ್ ಜೆಟ್ ಭಾರತದದ್ದಲ್ಲ, ಬದಲಾಗಿ ಪಾಕಿಸ್ತಾನದ ಜೆಎಫ್ -17 ಆಗಿರಬಹುದು. ಜೆಟ್‍ನಲ್ಲಿರುವ ಗುರುತುಗಳನ್ನು ನೋಡಿದರೆ, ಅದು ಭಾರತೀಯ ವಿಮಾನವಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅದರ ಬಣ್ಣ, ಗಾತ್ರ ಮತ್ತು ಇತರ ವೈಶಿಷ್ಟ್ಯಗಳನ್ನು ನೋಡಿದರೆ, ಅದು ಪಾಕಿಸ್ತಾನಿ ಯುದ್ಧ ವಿಮಾನವಾಗಿರಬೇಕು. ನಿವೃತ್ತ ಅಧಿಕಾರಿಗಳು ಇದು ಜೆಎಫ್ -17 ಮಾದರಿಯ ಸಣ್ಣ ಯುದ್ಧ ವಿಮಾನ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 

ಈ ವಿಷಯದ ಬಗ್ಗೆ ಭಾರತೀಯ ವಾಯುಪಡೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಭಾರತದ ವೈಮಾನಿಕ ದಾಳಿಯ ನಂತರ ಜೆಟ್ ಪತನಗೊಂಡಿರುವುದರಿಂದ ಅದು ಪಾಕಿಸ್ತಾನದ ಜೆಟ್ ಆಗಿರುವ ಸಾಧ್ಯತೆ ಹೆಚ್ಚು ಎಂದು ರಕ್ಷಣಾ ವಿಶ್ಲೇಷಕರು ಹೇಳುತ್ತಾರೆ. ಪ್ರಸ್ತುತ, ಪ್ಯಾಂಪೆÇೀರ್, ಅಖ್ನೂರ್ ಮತ್ತು ರಾಂಬನ್ ಪ್ರದೇಶಗಳಲ್ಲಿ ಮಿಲಿಟರಿ ಮತ್ತು ಇತರ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಘಟನಾ ಸ್ಥಳದಲ್ಲಿ ತನಿಖೆ ನಡೆಯುತ್ತಿದೆ.