ಸುದ್ಧಿಕನ್ನಡ ವಾರ್ತೆ
ನವದೆಹಲಿ: ಅಮೇರಿಕಾ,ಇಸ್ರೇಲ್, ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧ ಸಂಘರ್ಷವು ಭಾರತದಲ್ಲಿ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವಂತಾಗಿದೆ. ಇದರ ಮೊದಲ ಹಂತ ಎಂಬಂತೆ ಮಾರ್ಚ 7 ಶನಿವಾರದಿಂದ ಭಾರತ ದೇಶಾದ್ಯಂತ ಗೃಹ ಬಳಕೆಯ ಸಿಲಿಂಡರ್ ದರ 60 ರೂ ಹೆಚ್ಚಿಸಲಾಗಿದೆ.
ಅಂತೆಯೇ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ 115 ರೂ ಹೆಚ್ಚಿಸಲಾಗಿದೆ. ಇದರಿಂದಾಗಿ ಜನಸಾಮಾನ್ಯರಿಗೆ ಹೆಚ್ಚಿನ ಹೊರೆ ಬೀಳುವಂತಾಗಿದೆ. ಇದರಿಂದಾಗಿ ಹೋಟೆಲ್ , ರೆಸ್ಟೊರೆಂಟ್, ಮತ್ತು ಸಣ್ಣ ವಾಣಿಜ್ಯ ಸಂಸ್ಥೆಗಳ ಮೇಲೂ ಪರಿಣಾಮ ಬೀರಲಿದೆ.
ರಾಜಧಾನಿ ನವದೆಹಲಿಯಲ್ಲಿ ಗೃಹ ಬಳಕೆಯ ಸಿಲಿಂಡರ್ ಬೆಲೆ 853 ರೂಗಳಿಂದ 913 ರೂಗಳಿಗೆ ಏರಿಕೆಯಾಗಿದೆ. ದೇಶಾದ್ಯಂತ ಈ ಪರೀಷ್ಕøತ ಹೊಸ ದರ ಶನಿವಾರದಿಂದಲೇ ಜಾರಿಗೆ ಬಂದಿದೆ.
ರಷ್ಯಾದಿಂದ ಕಚ್ಚಾತೈಲ ಆಮದು….
ಭಾರತವು 2022 ರಿಂದಲೇ ರಷ್ಯಾದಿಂದ ಕಚ್ಚಾತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಭಾರತದ ಕಚ್ಚಾತೈಲ ಆಮದಿನ ಪೈಕಿ ಅಂದು ರಷ್ಯಾದ ಪಾಲು ಜಕೇವಲ 0.2 ರಷ್ಟಿತ್ತು. ಆದರೆ ಈ ಆಮದಿನ ಪ್ರಮಾಣ ಇಂದು ಗಣನೀಯವಾಗಿ ಏರಿಕೆಯಾಗಿದೆ.
