ಸುದ್ದಿ ಕನ್ನಡ ವಾರ್ತೆ
ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ದಾಳಿ ನಡೆಸಿದ ಬಳಿಕ ಮುಂಜಾಗ್ರತಾ ಕ್ರಮವಾಗಿ ಗಲ್ಫ್ ರಾಷ್ಟ್ರಗಳು ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಈ ಹಿನ್ನಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ಗೆ ತೆರಳುವ, ಆಗಮಿಸುವ ವಿಮಾನಯಾನ ಸಂಚಾರಗಳು ರದ್ದಾಗಿವೆ.
ಇರಾನ್ ಮೇಲೆ ದಾಳಿ ಪ್ರಾರಂಭವಾಗುವ ಮುಂಚೆಯೇ ಮಂಗಳೂರಿನಿಂದ ದೋಹಾಕ್ಕೆ ತೆರಳಲು ಟೇಕಾಫ್ ಆಗಿದ್ದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವು ಮುಂಬೈ ವಿಮಾನ ನಿಲ್ದಾಣದಲ್ಲಿ ರಾತ್ರಿ ೭ ಗಂಟೆಗೆ ಲ್ಯಾಂಡ್ ಆಗಲಿದೆ.
ಮಧ್ಯಾಹ್ನ ೧.೨೦ಕ್ಕೆ ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ Iಘಿ ೮೩೧ Iಘಿಇ-ಆಘಿಃ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನವನ್ನು ರದ್ದುಗೊಳಿಸಲಾಗಿದೆ. ಮಧ್ಯಾಹ್ನ ೩ ಗಂಟೆಗೆ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ ರದ್ದುಗೊಳಿಸಿರುವುದನ್ನು ತಿಳಿಸಿತು. ವಿಮಾನದಲ್ಲಿ ತೆರಳಲು ೧೭೪ ಪ್ರಯಾಣಿಕರು ಮತ್ತು ೬ ಮಂದಿ ಸಿಬ್ಬಂದಿ ಸಿದ್ಧರಾಗಿದ್ದರು ಎಂದು ಮಂಗಳೂರು ವಿಮಾನ ನಿಲ್ದಾಣದ ಪ್ರಕಟನೆ ತಿಳಿಸಿದೆ.
