ಸುದ್ಧಿಕನ್ನಡ ವಾರ್ತೆ
ಮುಂಬಯಿ: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ಕಾರಣವಾದ ಲಿಯರ್ ಜೆಟ್-45 ವಿಮಾನದಲ್ಲಿ ನುರಿತ ಯುವ ಪೈಲಟ್ ಕ್ಯಾಪ್ಟನ್ ಶಾಂಭವಿ ಪಾಠಕ್ ಸೇರಿದಂತೆ ಒಟ್ಟೂ 5 ಜನರು ಸಾವನ್ನಪ್ಪಿದ್ದಾರೆ.

ಈ ಫೈಲಟ್ ನ್ನು ನುರಿತ ಪೈಲಟ್ ಗಳು ನಡೆಸುತ್ತಿದ್ದರು, ಮುಖ್ಯ ಫೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್ ರವರು 16,500 ಗಂಟೆಗಳ ವಿಮಾನ ಹಾರಾಟ ಅನುಭವ ಹೊಂದಿದ್ದರು. ಯುವ ಪ್ರತಿಭೆ ಶಾಂಭವಿ ಪಾಠಕ್ ರವರು ಈ ವಿಮಾನದಲ್ಲಿ ಸಹ ಪೈಲಟ್ ಆಗಿದ್ದರು.

ಯುವ ಪೈಲಟ್ ಆಗಿದ್ದ ಶಾಂಭವಿ ಪಾಠಕ್ ರವರು ವಿಮಾನಯಾನ ಕ್ಷೇರತ್ರದಲ್ಲಿ ದೊಡ್ಡ ಸಾಧನೆಗೈಯ್ಯುವ ಕನಸು ಹೊತ್ತಿದ್ದರು. ಅವರು ಮುಂಬಯಿ ವಿಶ್ವವಿದ್ಯಾಲಯದಿಂದ ಏರೋನಾಟಿಕ್ಸ ಮತ್ತು ಏರೋಸ್ಪೇಸ್ ಸೈನ್ಸನಲ್ಲಿ ಪದವಿ ಪಡೆದಿದ್ದರು. ನ್ಯೂಜಿಲ್ಯಾಂಡ್ ಇಂಟರ್ ನ್ಯಾಶನಲ್ ಪೈಲಟ್ ಅಕಾಡಮಿಯಲ್ಲಿ ಹೆಚ್ಚಿನ ತರಬೇತಿ ಪಡೆದು ವೈತ್ತಿಪರ ಪೈಲಟ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.

ಬುಧವಾರ ಬೆಳಿಗ್ಗೆ 8.50 ರ ಸುಮಾರು ಬಾರಾಮತಿ ರನ್ ವೇಯಲ್ಲಿ ಲ್ಯಾಂಡ್ ಆಗಲು ಯತ್ನಿಸುತ್ತಿದ್ದಾಗ ವಿಮಾನವು ಪತನಗೊಂಡಿದೆ. ಈ ದುರ್ಘಟನೆಯಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ , ಪವಾರ್ ರವರ ವಯಕ್ತಿಕ ಭಧ್ರತಾ ಅಧಿಕಾರಿ ವಿಧಿತ್ ಜಾಧವ್ ಮತ್ತು ಸಹಾಯಕ ಪಿಂಕಿ ಮಾಲಿ ರವರು ಕೂಡ ಪ್ರಯಾಣಿಸುತ್ತಿದ್ದರು.