ಸುದ್ಧಿಕನ್ನಡ ವಾರ್ತೆ
ಮಳೆಗಾಲದ ಸಂದರ್ಭದ ಸುಂದರ ಜಲಪಾತದ (Beautiful waterfall) ವರ್ಷ ಪ್ರವಾಸೋದ್ಯಮಕ್ಕಾಗಿ ಮಹಾರಾಷ್ಟ್ರದ ಅಂಬೋಲಿಗೆ ಬಂದಿದ್ದ ಕೊಲ್ಹಾಪುರದ ರಾಜೇಂದ್ರ ಬಾಳಾಸೊ ಸನಗರ್ (45 ವರ್ಷ) ಅವರ ಮೃತದೇಹ ಸತತ ಕಾರ್ಯಾಚರಣೆಯ ನಂತರ ಕೊನೆಗೂ ಪತ್ತೆಯಾಗಿದೆ.

ಶುಕ್ರವಾರ ಕವಲೇಸಾದ್ ಪಾಯಿಂಟ್ (Kavalesad Point) ಬಳಿ ನೀರಲ್ಲಿ ಕೈತಪ್ಪಿ ಬಿದ್ದಿದ್ದ ರುಮಾಲ್ ಮೇಲೆತ್ತಲು ಹೋಗಿ ಸನಗರ್ ಹಠಾತ್ತನೆ ಆಳವಾದ ಜಲಪಾತದ ಕಂದಕಕ್ಕೆ ಬಿದ್ದಿದ್ದಾರೆ ಎಂದು ವರದಿಯಾಗಿದೆ. ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ NDRF, ರಕ್ಷಣಾ ತಂಡ, ಸಾವಂತವಾಡಿ ಪೆÇಲೀಸರು ಮತ್ತು ಸ್ಥಳೀಯರ ಜಂಟಿ ಪ್ರಯತ್ನದಿಂದ ಸುಮಾರು 400 ಅಡಿ ಆಳದ ಕಂದಕದಿಂದ ರಾಜೇಂದ್ರ ರವರ ಶವವನ್ನು ಹೊರತೆಗೆಯಲಾಯಿತು.

 

ಲಭ್ಯವಾದ ಮಾಹಿತಿಯ ಪ್ರಕಾರ, ಸನಗರ್ ಜಿಲ್ಲಾ ಪರಿಷತ್ತಿನ ಉದ್ಯೋಗಿಯಾಗಿದ್ದು, ವರ್ಷ ಪ್ರವಾಸೋದ್ಯಮಕ್ಕಾಗಿ ಮಹಾರಾಷ್ಟ್ರದ ಅಂಬೋಲಿಗೆ (Amboli in Maharashtra) ತನ್ನ ಸ್ನೇಹಿತರೊಂದಿಗೆ ಕೊಲ್ಹಾಪುರದಿಂದ ಬಂದಿದ್ದರು. ಅವರು ಶುಕ್ರವಾರ ಸಂಜೆ 4:30 ರ ಸುಮಾರಿಗೆ ಕವಲೇಸಾದ್ ಪಾಯಿಂಟ್ ಗೆ(Kavalesad Point)  ಹೋಗಿದ್ದರು. ಜಲಪಾತದ ಮೇಲ್ಬಾಗದ ನೀರಿನಲ್ಲಿ ಬಿದ್ದಿದ್ದ ಕರವಸ್ತ್ರವನ್ನು ಎತ್ತಿಕೊಳ್ಳುವ ಪ್ರಯತ್ನದಲ್ಲಿ ಅವರು ಕಾಲು ಜಾರಿ ಭಾರಿ ಆಳದ ಜಲಪಾತದ ಕಂದಕಕ್ಕೆ ಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

ದಟ್ಟವಾದ ಮಂಜು (thick fog) ಮತ್ತು ಸ್ಥಳದಲ್ಲಿ ಮೊಬೈಲ್ ಸಿಗ್ನಲ್ ಕೊರತೆಯಿಂದಾಗಿ ರಕ್ಷಣಾ ಕಾರ್ಯಾಚರಣೆ ಅಡ್ಡಿಯುಂಟಾಗಿತ್ತು. ಇದರಿಂದಾಗಿ ಘಟನೆ ನಡೆದ ದಿನ ಕಾರ್ಯಾಚರಣೆ ಸಾಧ್ಯವಾಗದೆಯೇ ಸ್ಥಗಿತಗೊಳಿಸಲಾಗಿತ್ತು. ನಂತರ ಮರುದಿನ ಅಂದರೆ ಶನಿವಾರ ಬೆಳಿಗ್ಗೆ ಕಾರ್ಯಾಚರಣೆ ಮುಂದುವರೆಸಿ ಸತತ ಪ್ರಯತ್ನದ ನಂತರ ಶವವನ್ನು ಪತ್ತೆ ಹಚ್ಚಿ ಮೇಲಕ್ಕೆತ್ತುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದೆ. ಮೃತದೇಹವನ್ನು ಶವಪರೀಕ್ಷೆಗಾಗಿ ಅಂಬೋಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಸಹಾಯಕ ಪೆÇಲೀಸ್ ನಿರೀಕ್ಷಕ ಜಯೇಶ್ ಕಂದೇರ್ಕರ್ ಅವರ ಮಾರ್ಗದರ್ಶನದಲ್ಲಿ ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಅಪಘಾತವು ಅಂಬೋಲಿಯ ಪ್ರವಾಸಿಗರಲ್ಲಿ ಆತಂಕ ಮೂಡಿಸಿದ್ದು, ಕವಲೇಸಾದ್ ಪಾಯಿಂಟ್ (Kavalesad Point) ಪ್ರದೇಶದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಬೇಕೆಂಬ ಆಘ್ರಹ ವ್ಯಕ್ತವಾಗಿದೆ.