ಸುದ್ದಿ ಕನ್ನಡ ವಾರ್ತೆ
ದೆಹಲಿ : ಚಿಕ್ಕಮಗಳೂರಿನಿಂದ 30 ಕಿಲೋಮೀಟರ್ ದೂರದಲ್ಲಿರುವ ದತ್ತಪೀಠದಲ್ಲಿ ಶ್ರೀ ಗುರು ದತ್ತಾತ್ರೇಯರು ಸಾಧನೆ ಮಾಡಿದ್ದರು; ಆದರೆ ಟಿಪ್ಪು ಸುಲ್ತಾನನು ಅಲ್ಲಿ ಬಾಬಾ ಬುಡನ್ ದರ್ಗಾವನ್ನು ಸ್ಥಾಪಿಸಿದ. ಅದರ ನಂತರ ಅಲ್ಲಿನ ನೂರಾರು ಎಕರೆ ಪ್ರದೇಶದ ಇಸ್ಲಾಮೀಕರಣವು ಮಜಾರ್ಗಳು, ಸಮಾಧಿಗಳು, ದಫನಭೂಮಿ, ದರ್ಗಾ ಮತ್ತು ಗೋಮಾಂಸ ಭಕ್ಷಣದಿಂದಾಗಿತ್ತು; ಆದರೆ ಕಳೆದ 30 ವರ್ಷಗಳಿಂದ ವಿಶ್ವ ಹಿಂದೂ ಪರಿಷತ್, ಶ್ರೀರಾಮ ಸೇನೆ ಮತ್ತು ಹಿಂದುತ್ವನಿಷ್ಠ ಸಂಘಟನೆಗಳು ಮಾಡಿದ ಆಂದೋಲನಗಳು ಮತ್ತು ನ್ಯಾಯಾಲಯದಲ್ಲಿ ನಡೆಸಿದ ಹೋರಾಟದಿಂದಾಗಿ 90% ಪ್ರದೇಶವು ದತ್ತ ಭಕ್ತರದ್ದಾಗಿದೆ. ಈಗ ಶುಕ್ರವಾರದಂದು ನಮಾಜ್ ಪಠಣ ಮಾಡಲು ಮೌಲ್ವಿಯು ಬರುತ್ತಾರೆ. ಅದು ಕೂಡ ನ್ಯಾಯಾಲಯದ ಆದೇಶದ ಮೇರೆಗೆ ಶೀಘ್ರದಲ್ಲಿಯೇ ನಿಲ್ಲಲಿದ ಎಂದು ಕರ್ನಾಟಕದ ಶ್ರೀರಾಮ ಸೇನೆಯ ಸಂಸ್ಥಾಪಕರಾದ ಶ್ರೀ. ಪ್ರಮೋದ ಮುತಾಲಿಕ್ ಅವರು ಹೇಳಿದರು.
ಶ್ರೀರಾಮ ಮಂದಿರಕ್ಕಾಗಿ ನ್ಯಾಯಾಲಯದಲ್ಲಿನ ಹೋರಾಟ ಶ್ರೀರಾಮನೇ ನೀಡಿದ ಅನುಭವ ! – ನ್ಯಾಯವಾದಿ ಶ್ರೀಧರ ಪೊತರಾಜು
ಈ ಸಂದರ್ಭದಲ್ಲಿ ‘ಮಂದಿರ ರಕ್ಷಣಾ ಚರ್ಚಾಗೋಷ್ಠಿ’ಯಲ್ಲಿ ಮಾತನಾಡಿದ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಶ್ರೀಧರ ಪೊತರಾಜು ಅವರು, ‘ಶ್ರೀರಾಮ ಮಂದಿರಕ್ಕಾಗಿ ಹಿಂದೂಗಳು ನ್ಯಾಯಾಲಯದ ಹೊರಗೆ ನಡೆಸಿದ ಹೋರಾಟ ಅದ್ಭುತವಾದದ್ದು; ಆದರೆ ನಾವು ನ್ಯಾಯವಾದಿಗಳು ನ್ಯಾಯಾಲಯದಲ್ಲಿ ನಡೆಸಿದ ಹೋರಾಟವು ಶ್ರೀರಾಮನು ನಮಗೆಲ್ಲರಿಗೂ ತನ್ನ ಅಸ್ತಿತ್ವದ ಬಗ್ಗೆ ನೀಡಿದ ಅನುಭವವೇ ಆಗಿದೆ. ಶ್ರೀರಾಮನ ಕೃಪೆಯಿಂದಲೇ ಋಷಿ ಸಮಾನ ಹಿರಿಯ ನ್ಯಾಯವಾದಿ ಕೇಶವ ಪರಾಸರನ್ ಅವರು ತಮ್ಮ 92ನೇ ವಯಸ್ಸಿನಲ್ಲಿಯೂ ಈ ಹೋರಾಟವನ್ನು ಹುರುಪಿನಿಂದ ನಡೆಸಿದರು. ಅವರಲ್ಲಿ ಅಸಾಧ್ಯವಾದ ಶ್ರದ್ಧೆಯನ್ನು ಮೂಡಿಸಿದವನು ಕೂಡ ಶ್ರೀರಾಮನೇ ಆಗಿದ್ದನು.
ಮಂದಿರ ಸಂಸ್ಕೃತಿಯ ರಕ್ಷಣೆಗಾಗಿ ಹಿಂದೂಗಳು ಒಗ್ಗೂಡಬೇಕು ! – ಶ್ರೀ. ಸುನೀಲ ಘನವಟ್, ಹಿಂದೂ ಜನಜಾಗೃತಿ ಸಮಿತಿ
ಮಂದಿರಗಳು ಹಿಂದೂ ಧರ್ಮದ ಆಧಾರಶಿಲೆಯಾಗಿದೆ; ಆದ್ದರಿಂದ ಮಂದಿರಗಳು ಮತ್ತು ಮಂದಿರ ಸಂಪ್ರದಾಯಗಳ ರಕ್ಷಣೆಗಾಗಿ ‘ಮಂದಿರ ಮಹಾಸಂಘ’ವು 15 ಸಾವಿರ ಮಂದಿರಗಳನ್ನು ಸಂಘಟಿಸಿದೆ. ಅದರಿಂದ 2 ಸಾವಿರದ 300 ಕ್ಕಿಂತ ಹೆಚ್ಚು ಮಂದಿರಗಳಲ್ಲಿ ವಸ್ತ್ರಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಇದರ ಪರಿಣಾಮವಾಗಿ ದೇಶದಲ್ಲಿ ಮಾತ್ರವಲ್ಲ, ಆಸ್ಟ್ರೇಲಿಯಾದಂತಹ ದೇಶದಲ್ಲಿಯೂ ವಸ್ತ್ರಸಂಹಿತೆ ಜಾರಿಯಾಗಿದೆ. ಮಂದಿರಗಳು ಧರ್ಮ ಶಿಕ್ಷಣದ ಕೇಂದ್ರಗಳಾಗಲು ಮಾಡಿದ ಪ್ರಯತ್ನಗಳಿಂದಾಗಿ ಪ್ರತಿ ವಾರ 2೦ ಸಾವಿರ ಹಿಂದೂಗಳು ಆರತಿಗಾಗಿ ಒಗ್ಗೂಡುತ್ತಾರೆ. ಹಾಗಾಗಿ ಅವುಗಳ ರಕ್ಷಣೆಗಾಗಿ ಒಂದಾಗುವುದು ನಮ್ಮ ಧರ್ಮಕರ್ತವ್ಯವೇ ಆಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್ಗಢ ರಾಜ್ಯಗಳ ಸಂಘಟಕರು ಹಾಗೂ ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕ ಶ್ರೀ. ಸುನೀಲ ಘನವಟ್ ಅವರು ತಿಳಿಸಿದರು. ಪತ್ರಕರ್ತೆ ಶ್ವೇತಾ ತ್ರಿಪಾಠಿ ಅವರು. ಈ ಗೋಷ್ಠಿಯ ಸೂತ್ರಸಂಚಾಲನೆಯನ್ನು ನಡೆಸಿದರು.
ಭಾರತವನ್ನು ಕೆಣಕುವವರನ್ನು ಈಗ ಸುಮ್ಮನೆ ಬಿಡುವುದಿಲ್ಲ! – ಸಂಜಯ್ ಸೇಠ್, ರಾಜ್ಯ ರಕ್ಷಣಾ ಸಚಿವರು
ಭಾರತ ಭೂಮಿಯು ಛತ್ರಪತಿ ಶಿವಾಜಿ ಮಹಾರಾಜರು, ಮಹಾರಾಣಾ ಪ್ರತಾಪ, ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ಮತ್ತು ರಾಣಿ ಲಕ್ಷ್ಮೀಬಾಯಿ ಅವರ ಶೌರ್ಯದ ಮತ್ತು ವಿಶ್ವ ಕಲ್ಯಾಣವನ್ನು ಬಯಸುವ ಸನಾತನ ಸಂಸ್ಕೃತಿಯ ನಾಡಾಗಿದೆ. ದುರದೃಷ್ಟವಶಾತ್, ಕಳೆದ 60 ರಿಂದ 65 ವರ್ಷಗಳಲ್ಲಿ, ಅಕ್ಬರ್-ಬಾಬರ್ನಂತಹ ಆಕ್ರಮಣಕಾರರನ್ನು ‘ಮಹಾನ್’ ಎಂದು ಕರೆಯುವ ಮೂಲಕ ನಮ್ಮನ್ನು ಗುಲಾಮಗಿರಿಯ ಮನಸ್ಥಿತಿಯಲ್ಲಿ ಬಂಧಿಸಲಾಯಿತು. ಆ ಗುಲಾಮಗಿರಿಯ ಎಲ್ಲಾ ಚಿಹ್ನೆಗಳು ಮತ್ತು ಸರಪಳಿಗಳನ್ನು ಈಗ ಸಂಪೂರ್ಣವಾಗಿ ಮುರಿಯಲಾಗುತ್ತಿದೆ. ಈಗ ಹೊಸ ಭಾರತ ಎಚ್ಚರಗೊಂಡಿದೆ. ಅದು ಯಾರಿಗೂ ತಲೆಬಾಗುವುದಿಲ್ಲ ಮತ್ತು ‘ಆಪರೇಷನ್ ಸಿಂಧೂರ’ ನಲ್ಲಿ ನಮ್ಮ ಸೈನಿಕರು ತೋರಿದ ಶೌರ್ಯ ಜಗತ್ತಿಗೆ ಸಾಬೀತಾಗಿದೆ. ಭಾರತವನ್ನು ಕೆಣಕುವವರನ್ನು ನಾವು ಈಗ ಸುಮ್ಮನೆ ಬಿಡುವುದಿಲ್ಲ ಎಂದು ಕೇಂದ್ರೀಯ ರಾಜ್ಯ ರಕ್ಷಣಾ ಸಚಿವ ಶ್ರೀ ಸಂಜಯ್ ಸೇಠ್ ಪ್ರತಿಪಾದಿಸಿದರು. ಅವರು ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ‘ರಾಷ್ಟ್ರೀಯ ಸುರಕ್ಷತೆಯಲ್ಲಿ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆಗಳ ಕೊಡುಗೆ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
