ಸುದ್ದಿ ಕನ್ನಡ ವಾರ್ತೆ

ದೆಹಲಿ – ದೆಹಲಿಯ ‘ಭಾರತ್ ಮಂಡಪಮ್ ‘ನಲ್ಲಿ ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ಪ್ರಸ್ತುತ ಪಡಿಸುತ್ತಿರುವ ಮತ್ತು ‘ಸನಾತನ ಸಂಸ್ಥೆ’ ಆಯೋಜಿಸಿದ ಭವ್ಯ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದಲ್ಲಿ ‘ಸ್ವರಾಜ್ಯದ ಶೌರ್ಯನಾದ’ ಎಂಬ ಶಸ್ತ್ರಾಸ್ತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಶಸ್ತ್ರಾಸ್ತ್ರ ಪ್ರದರ್ಶನದಿಂದ ಪ್ರಭಾವಿತರಾದ ಸ್ವಾಮಿ ದೀಪಾಂಕರ್ ಅವರು, ಈ ಪ್ರದರ್ಶನವನ್ನು ನೋಡಿದಾಗ ಮೈ ರೋಮಾಂಚನಗೊಂಡಿತು ಹಾಗೂ ಪೂರ್ವಜರ ಬಗ್ಗೆ ಹೆಮ್ಮೆ ಮತ್ತು ಜೀವನಕ್ಕೆ ಹೊಸ ಪ್ರೇರಣೆ ದೊರೆಯುತ್ತದೆ ಎಂಬುದು ತಮ್ಮ ದೃಢ ನಂಬಿಕೆಯಾಗಿದೆ ಎಂದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಈ ಪ್ರದರ್ಶನಕ್ಕೆ ಭೇಟಿ ನೀಡಬೇಕು ಎಂದು ಅವರು ಮನವಿ ಮಾಡಿದರು.

ದೆಹಲಿಯ ಇತಿಹಾಸದಲ್ಲಿ ಮೊಘಲರದ್ದಲ್ಲ; ಮರಾಠರು, ಸಿಖ್ಖರು, ಜಾಟರ ಕೊಡುಗೆ ದೊಡ್ಡದು! – ಶ್ರೀ . ಕಪಿಲ್ ಮಿಶ್ರಾ, ಸಾಂಸ್ಕೃತಿಕ ಸಚಿವರು, ದೆಹಲಿ

ಈ ಸಂದರ್ಭದಲ್ಲಿ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ದೆಹಲಿಯ ಸಾಂಸ್ಕೃತಿಕ ಸಚಿವ ಶ್ರೀ. ಕಪಿಲ್ ಮಿಶ್ರಾ ಅವರು, ‘ದೆಹಲಿಯ ಇತಿಹಾಸದಲ್ಲಿ ಮೊಘಲರ ಕೊಡುಗೆ ದೊಡ್ಡದು ಎಂದು ನಿರಂತರವಾಗಿ ಹೇಳಲಾಗುತ್ತದೆ; ಆದರೆ ಮೊಘಲರ ಕೊಡುಗೆ ಅತ್ಯಲ್ಪವಿತ್ತು. ಅದಕ್ಕೆ ಹೋಲಿಸಿದರೆ ಮರಾಠರು, ಸಿಖ್ಖರು, ಜಾಟರ ಕೊಡುಗೆ ದೊಡ್ಡದಾಗಿತ್ತು. ಅವರಿಗೆ ದೊಡ್ಡ ಇತಿಹಾಸವಿದೆ. ಮರಾಠರ ಅನುಮತಿ ಪಡೆದ ನಂತರವೇ ಮೊಘಲರು ದೆಹಲಿಯ ಕೆಂಪು ಕೋಟೆಯಿಂದ ಒಂದು ಹೆಜ್ಜೆ ಹೊರಗಿಡುತ್ತಿದ್ದರು. ಇದು ನಿಜವಾದ ಇತಿಹಾಸ. ಬ್ರಿಟಿಷರು ದೆಹಲಿಯನ್ನು ವಶಪಡಿಸಿಕೊಂಡಿದ್ದು ಮೊಘಲರಿಂದಲ್ಲ, ಬದಲಾಗಿ ಮರಾಠರರಿಂದ ಎಂದು ಹೇಳಿದರು.

ದೆಹಲಿಯಲ್ಲಿ ಭಾರತೀಯ ಶಸ್ತ್ರಾಸ್ತ್ರ ಪರಂಪರೆಯ ಭವ್ಯ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುವುದು !

ಶಿವಾಜಿ ಮಹಾರಾಜರ ಕಾಲದ ಶಸ್ತ್ರಾಸ್ತ್ರಗಳ ಸಂಗ್ರಾಹಕ ಶ್ರೀ. ರಾಕೇಶ್ ಧಾವಡೆ ಅವರು, ದೇಶದಲ್ಲಿ ಶಿವಾಜಿ ಕಾಲದ ಶಸ್ತ್ರಾಸ್ತ್ರಗಳ ಶಾಶ್ವತ ವಸ್ತುಸಂಗ್ರಹಾಲಯವನ್ನು ನಿರ್ಮಿಸಬೇಕೆಂದು ಶ್ರೀ. ಮಿಶ್ರಾ ಅವರಲ್ಲಿ ವಿನಂತಿಸಿದಾಗ, ಸಚಿವರು ತಕ್ಷಣವೇ, ‘ದೆಹಲಿಯ ಮಧ್ಯಭಾಗದಲ್ಲಿ ಭಾರತೀಯ ಶಸ್ತ್ರಾಸ್ತ್ರ ಸಂಪ್ರದಾಯ ಮತ್ತು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ಭವ್ಯ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುವುದು’, ಎಂದು ಭರವಸೆ ನೀಡಿದರು.

‘ವಂದೇ ಮಾತರಮ್ ‘ ಗೀತೆಗೆ 150 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ವಿಶೇಷ ಪ್ರದರ್ಶನ !

‘ವಂದೇ ಮಾತರಮ್ ‘ ಗೆ 150 ವರ್ಷಗಳು ಪೂರ್ಣಗೊಳ್ಳುತ್ತಿರುವ ನಿಮಿತ್ತ ಈ ಕ್ರಾಂತಿಕಾರಿ ಗೀತೆಯ ಉತ್ಪತ್ತಿ, ಸಂಘರ್ಷ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಇದರ ಭೂಮಿಕೆಯ ಬಗ್ಗೆ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಈ ಪ್ರದರ್ಶಿನಿಯು ರಾಷ್ಟ್ರಭಕ್ತಿ, ತ್ಯಾಗ ಮತ್ತು ಪ್ರೇರಣೆಯ ಅನೇಕ ಪ್ರಸಂಗಗಳ ಬಗ್ಗೆ ಬೆಳಕು ಬೀರುತ್ತದೆ.

ಈ ಸಂದರ್ಭದಲ್ಲಿ ಲೇಖಕಿ ಸೌ. ಶೇಫಾಲಿ ವೈದ್ಯ, ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ, ‘ಸೇವ್ ಕಲ್ಚರ್ ಸೇವ್ ಭಾರತ್ ಫೌಂಡೇಶನ್’ ಅಧ್ಯಕ್ಷರು ಮತ್ತು ಭಾರತದ ಮಾಜಿ ಮಾಹಿತಿ ಆಯುಕ್ತರಾದ ಶ್ರೀ. ಉದಯ ಮಾಹೂರಕರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಭಾರತ್ ಮಂಡಪಮ್ ಆವರಣದ ಹಾಲ್ ನಂ. 12 ರಲ್ಲಿ ಏರ್ಪಡಿಸಲಾದ ಐತಿಹಾಸಿಕ ಶಸ್ತ್ರಾಸ್ತ್ರ ಪ್ರದರ್ಶನವನ್ನು ದೆಹಲಿಯ ಸಮಸ್ತ ಜನತೆ ತಪ್ಪದೇ ನೋಡಬೇಕು, ಎಂದು ಮನವಿ ಮಾಡುತ್ತೇವೆ.