ಸುದ್ಧಿಕನ್ನಡ ವಾರ್ತೆ
ನವದೆಹಲಿ: ಜೂನ್ 12, 2025 ರಂದು ಗುಜರಾತ್ ನ ಅಹಮದಾಬಾದ್ ನಲ್ಲಿ ಸಂಭವಿಸಿದ  Air India ವಿಮಾನ ದುರಂತದಲ್ಲಿ 241 ಬಲಿಯಾದ ನಂತರ ಇದೀಗ ವಿಮಾನಗಳಲ್ಲಿ 11A ಸೀಟ್ ಗೆ ಬೇಡಿಕೆ ಹೆಚ್ಚಾಗಿದ್ದು, ಎಷ್ಟರಮಟ್ಟಿಗೆ ಎಂದರೆ ಪ್ರಯಾಣಿಕರು ಬ್ಲಾಕ್ ನಲ್ಲಿ 11 ಎ ಸೀಟ್ ಖರೀದಿಗೆ ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ವಿಮಾನಗಳಲ್ಲಿನ 11A ಸೀಟ್ ನ ಸುರಕ್ಷತೆ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗುತ್ತಲೇ ವಿಮಾನದ 11ಎ ಸೀಟ್ ಗೆ ಬೇಡಿಕೆ ಹೆಚ್ಚಾಗಿದೆ ಎನ್ನಲಾಗಿದೆ. ಇತ್ತೀಚೆಗೆ ಅಹಮದಾಬಾದ್‍ನಲ್ಲಿ 241 ಜೀವಗಳನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ ಎಐ-171 ರ ದುರಂತದಲ್ಲಿ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಶ್‍ಕುಮಾರ್ ರಮೇಶ್ ಕೂಡ ಇದೇ 11 A ಸೀಟ್ ನಲ್ಲಿ ಕುಳಿತಿದ್ದರು, ಇದರಿಂದಾಗಿ ಅವರು ಸುರಕ್ಷಿತವಾಗಿ ಪಾರಾಗಿದ್ದಾರೆ.

ಇದೀಗ ಈ ವಿಚಾರವೂ ಕೂಡ 11A ಸೀಟ್ ಗೆ ಬೇಡಿಕೆ ಹೆಚ್ಚಾಗುವಂತೆ ಮಾಡಿದ್ದು, 11ಎ ಸೀಟ್ ನ ದರ ಕೂಡ ಸಾಮಾನ್ಯ ಸೀಟ್ ಗಳಿಗಿಂತ ದುಬಾರಿಯಾಗುವಂತೆ ಮಾಡಿದೆ. ಇದುವರೆಗೂ 11A ಸೀಟ್ ನಿರಾಕರಿಸುತ್ತಿದ್ದ ಪ್ರಯಾಣಿಕರು ಇದೀಗ ಅದೇ ಸೀಟ್ ಗೆ ಹೆಚ್ಚಿನ ಹಣ ತೆತ್ತು ಬ್ಲ್ಯಾಕ್ ನಲ್ಲಿ ಪಡೆಯಲು ಮುಂದಾಗುತ್ತಿದ್ದಾರೆ. ಕೆಲವು ಪ್ರಯಾಣಿಕರು 11A ಸೀಟ್ ಗಾಗಿ ಹೆಚ್ಚುವರಿ ಹಣವನ್ನು ಪಾವತಿಸಲು ಸಹ ಸಿದ್ಧರಿದ್ದಾರೆ ಎಂದು ಭಾರತೀಯ ಟ್ರಾವೆಲ್ ಏಜೆಂಟ್‍ಗಳು ವರದಿ ಮಾಡಿದ್ದಾರೆ.

ಪ್ರಯಾಣಿಕರು ಈಗ ವಿಮಾನಗಳಲ್ಲಿ ತುರ್ತು ನಿರ್ಗಮನದ ಸೀಟುಗಳನ್ನು ವಿಶೇಷವಾಗಿ 11A ಹುಡುಕುತ್ತಿರುವುದು ಉತ್ತಮ ಬದುಕುಳಿಯುವ ಸಾಧ್ಯತೆಗಳನ್ನು ನೀಡುತ್ತದೆ ಎಂದು ನಂಬಿದ್ದಾರೆ ಎಜೆಂಟ್ ಗಳು ಹೇಳಿದ್ದಾರೆ. ’11A ಸೀಟ್ ತುರ್ತು ನಿರ್ಗಮನದ ಪಕ್ಕದಲ್ಲಿಲ್ಲದಿದ್ದರೂ ಸಹ, ಪ್ರಯಾಣಿಕರು ಅದನ್ನೇ ಕೇಳುತ್ತಿದ್ದಾರೆ. “ಇದು ನಂಬಿಕೆ, ಸೌಕರ್ಯ ಮತ್ತು ಮನಸ್ಸಿನ ಶಾಂತಿಯ ಕುರಿತಾದ್ದರಿಂದ ಆ ಸೀಟಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.