ಸುದ್ದಿ ಕನ್ನಡ ವಾರ್ತೆ
. ವಿಶಾಖಪಟ್ಟಣ:ಭಾರತ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಗಳ ನಡುವಣ 3 ಪಂದ್ಯದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲಿ ಅಧಿಕಾರಯುತ ಪ್ರದರ್ಶನ ನೀಡಿ ಸರಣಿಯನ್ನು 2-1ರಿಂದ ಗೆದ್ದುಕೊಂಡಿದೆ.
ಪಂದ್ಯಾವಳಿಯ ಮೊದಲ ಪಂದ್ಯವನ್ನು ಭಾರತ ಕ್ರಿಕೆಟ್ ತಂಡವು ಗೆದ್ದರೆ,ಎರಡನೇಯ ಕ್ರಿಕೆಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು ಗೆದ್ದುಕೊಂಡು ಸಮಬಲ ಸಾಧಿಸಿತ್ತು.ಪಂದ್ಯಾವಳಿಯ ಅಂತಿಮ 3 ನೇಯ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ನೇತೃತ್ವದ ಭಾರತ ಕ್ರಿಕೆಟ್ ತಂಡವು ಪ್ರಸಿದ್ಧಕೃಷ್ಣ ಹಾಗೂ ಕುಲದೀಪ್ ಯಾದವ ಅವರ ಉತ್ತಮ ಬೌಲಿಂಗ ಪ್ರದರ್ಶನ ಪರಿಣಾಮ ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡದ ಮೊತ್ತವನ್ನು 270 ರನ್ ಗೆ ಆಲೌಟ್ ಮಾಡಿ 271 ರನ್ ಗಳ ಗುರಿಯನ್ನು ಪಡೆದಿತ್ತು.
ಗೆಲುವಿನ ಗುರಿಯನ್ನು ಬೆನ್ನಟ್ಟಿದ ಭಾರತ ಕ್ರಿಕೆಟ್ ತಂಡದ ಆಟಗಾರರಾದ ಯಶಸ್ವಿ ಜೈಸ್ವಾಲ್ ರವರ ಅಜೇಯ ಅಮೋಘ ಶತಕ,ರೋಹಿತ ಶರ್ಮಾ,ವಿರಾಟ್ ಕೊಹ್ಲಿ ಅವರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಪಂದ್ಯವನ್ನು ಗೆದ್ದುಕೊಂಡು, ಟೆಸ್ಟ್ ಸರಣಿಯಲ್ಲಿನ ಸೋಲಿನ ಕಹಿ ನೆನಪನ್ನು ಮರೆಮಾಚಿಸಿದೆ. ಕನ್ನಡಿಗ ಕೆ ಎಲ್ ರಾಹುಲ್ ನೇತೃತ್ವದಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡದ ವಿರುದ್ಧ ಇದು ಎರಡನೇಯ ಸರಣಿ ಗೆಲುವಾಗಿದೆ,2023 ರಲ್ಲಿ ಏಕದಿನ ಸರಣಿಯ ಗೆಲುವು ಕಂಡಿತ್ತು.
