ಸುದ್ಧಿಕನ್ನಡ ವಾರ್ತೆ
ನವದೆಹಲಿ: ದೆಹಲಿಯಿಂದ ಗುರುವಾರ ಬೆಳಗ್ಗೆ ಲೇಹ್ ಗೆ ತೆರಳುತ್ತಿದ್ದ ಇಂಡಿಗೋ ವಿಮಾನವು (IndiGo Flight) ಎರಡು ಗಂಟೆಗಳಿಗೂ ಹೆಚ್ಚು ಕಾಲ ಮೇಲೆಯೇ ಹಾರಾಟ ನಡೆಸಿ ನಂತರ ತಾಂತ್ರಿಕ ಸಮಸ್ಯೆಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಗೆ ವಾಪಸ್ ಆಗಿದೆ. ಈ ಘಟನೆಯಿಂದಾಗಿ ಪ್ರಯಾಣಿಕರು ಕೂಡ ಕಂಗಾಲಾಗಿದ್ದಾರೆ.
ವಿಮಾನ ಟ್ರ್ಯಾಕಿಂಗ್ ಲಭ್ಯವಿರುವ ಮಾಹಿತಿಯ ಪ್ರಕಾರ, ದೆಹಲಿಯಿಂದ ಲೇಹ್ ಗೆ ಹಾರಾಟ ನಡೆಸುತ್ತಿದ್ದ 6ಇ 2006 ವಿಮಾನ ಎರಡು ಗಂಟೆಗಳಿಗೂ ಹೆಚ್ಚು ಕಾಲ ಹಾರಾಟ ನಡೆಸಿದ ನಂತರ ರಾಷ್ಟ್ರ ರಾಜಧಾನಿ ದೆಹಲಿಗೆ ವಾಪಸ್ಸು ಬಂದಿಳಿದಿದೆ.
“ಜೂನ್ 19, 2025 ರಂದು ದೆಹಲಿಯಿಂದ ಲೇಹ್ ಗೆ ಹಾರಾಟ ನಡೆಸುತ್ತಿದ್ದ ಇಂಡಿಗೋ ವಿಮಾನ 6ಇ 2006, ತಾಂತ್ರಿಕ ಸಮಸ್ಯೆಯಿಂದಾಗಿ (technical problem) ಲೇಹ್ ನಲ್ಲಿ ಲ್ಯಾಂಡಿಂಗ್ ಮಾಡಲು ಸಾಧ್ಯವಾಗದ ಕಾರಣ ಮೂಲ ಸ್ಥಾನಕ್ಕೆ ಮರಳಿತು. ಕಾರ್ಯವಿಧಾನಗಳ ಪ್ರಕಾರ ಪೈಲಟ್ ದೆಹಲಿಗೆ ಮರಳಿದರು” ಎಂದು ವಿಮಾನಯಾನ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.