ಸುದ್ಧಿಕನ್ನಡ ವಾರ್ತೆ
ಚನ್ನೈ:ದೇಶಾದ್ಯಂತ ಆತಂಕ ಹುಟ್ಟಿಸಿದ್ದ ದಿತ್ವಾ ಚಂಡಮಾರುತವು ಉತ್ತರದ ಕಡೆಗೆ ಚಲಿಸುತ್ತಿರುವುದರಿಂದ ಚಂಡಮಾರುತ ದುರ್ಬಲಗೊಳ್ಳುವ ಲಕ್ಷಣ ಕಂಡುಬರುತ್ತಿದೆ ಎಂದು ಚನ್ನೈ ಹವಾಮಾನ ಕೇಂದ್ರ ಮಾಹಿತಿ ನೀಡಿದೆ. ಆದರೆ ಭಾನುವಾರತಮಿಳುನಾಡು,ಪುದುಚೆರಿ,ಆಂಧ್ರಪ್ರದೇಶ ಕರಾವಳಿಗೆ ಹತ್ತಿರವಿರುವ ನೈಋತ್ಯ ಕೊಲ್ಲಿಯನ್ನು ಪ್ರೇಶಿಸುವ ಸಾಧ್ಯತೆಯಿದೆ. ಚನ್ನೈ ಉಪನಗರಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ದಿತ್ವಾ ಚಂಡ ಮಾರುತವು ಹಲವಾರು ಕರಾವಳಿ ಜಿಲ್ಲೆಗಳಿಗೆ ಭಾರಿ ಮಳೆಯನ್ನು ಸುರಿಸಲಿದೆ.ಡಿಸೆಂಬರ್ 1 ರವರೆಗೆ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಮಿಳುನಾಡು ಪುದುಚೆರಿ ಭಾಗದ ಕರಾವಳಿಯಲ್ಲಿ ಶನಿವಾರ ಗಂಟೆಗೆ 70 ರಿಂದ 80 ಕಿಮಿ ವೇಗದಲ್ಲಿ ಗಾಳಿ ಬೀಸಿದೆ. ಸಮುದ್ರದ ಪರಿಸ್ಥಿತಿ ಪ್ರಕ್ಷುಬ್ದವಾಗಿ ಮುಂದುವರೆಯಲಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.