ಸುದ್ಧಿಕನ್ನಡ ವಾರ್ತೆ
ಬಿಗ್ ಬಾಸ್ ಕನ್ನಡ (BIG BOSS Kannada) ಸೀಜನ್ ಸ್ಫರ್ಧಿ ಉತ್ತರ ಕರ್ನಾಟಕದ ಮಾಳು ನಿಪನಾಳ ರವರು ಬುಗ್ ಬಾಸ್ ನಲ್ಲಿ ಹಾಡಿದ ಅದೊಂದು ಹಾಡಿನಿಂದ ಅವರು ನಟಿಸಿ ಹಾಡಿದ್ದ ಹಾಡು ಎಷ್ಟೊಂದು ಹಿಟ್ ಆಗಿದೆ ಎಂದರೆ ಆಶ್ಚರ್ಯ ಪಡ್ತೀರಾ….
ಹೌದು ಮಾಳು ರವರು ಬಿಗ್ ಬಾಸ್ ನಲ್ಲಿ ಹೇ ಡ್ರೈವರ ನೀ ನನ್ನ ಲವ್ವರ..ಎಂಬ ಹಾಡು ಹಾಡಿನ ನಂತರ ಎಲ್ಲರ ಬಾಯಲ್ಲೂ ಇದೇ ಹಾಡು ಕೇಳಿ ಬರುವಂತಾಗಿದೆ. ಮಾಳು ರವರು ಹಾಡಿ ನಟಿಸಿದ್ದ ಈ ಹಾಡನ್ನು ಅವರ ಯೂಟುಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಒಂದೇ ತಿಂಗಳಲ್ಲಿ ಈ ಹಾಡನ್ನು 4.6 ಮಿಲಿಯನ್ ಜನರು ವೀಕ್ಷಿಸಿದ್ದಾರೆ.
ಉತ್ತರಕರ್ನಾಟಕ ಮೂಲದ ಮಾಳು ರವರು ತಮ್ಮ ಯೂಟುಬ್ ಖಾತೆಯಲ್ಲಿ ಇಂತಹ ಹಲವು ಹಾಡಿನ ವೀಡಿಯೊ ಅಪ್ ಲೋಡ್ ಮಾಡಿದ್ದಾರೆ. ಅವರ ಹಲವು ಹಾಡುಗಳು ಹೆಚ್ಚಿನ ಜನರು ವೀಕ್ಷಿಸಿದ್ದಾರೆ. ಆದರೆ ಬಿಗ್ ಬಾಸ್ ನಲ್ಲಿ ಹಾಡಿದ ಹೇ ಡ್ರೈವರ ನೀ ನನ್ನ ಲವ್ವರ ಹಾಡು ಮಾತ್ರ ಹೆಚ್ಚು ಪ್ರಸಿದ್ಧಿಯಾಗಿದೆ. ಇದೇ ಹಾಡಿನ ಹಲವು ರೀಲ್ಸ ಗಳು ಕೂಡ ಹರಿದಾಡುತ್ತಿವೆ.
ಉತ್ತರ ಕರ್ನಾಟಕದ ಮಾಳು ರವರು ಬಿಗ್ ಬಾಸ್ ನಲ್ಲಿ ಹೆಚ್ಚಿನ ಓಟು ಗಿಟ್ಟಿಸಿಕೊಂಡು ಬಿಗ್ ಬಾಸ್ ಮನೆಯಲ್ಲಿ ಮುಂದುವರೆದಿದ್ದಾರೆ. ಇದಕ್ಕೆ ಇತರ ಎಲ್ಲೆಡೆಯ ಓಟಿಗಿಂತ ಉತ್ತರಕರ್ನಾಟಕದ ಜನರ ಓಟುಗಳ ಮೂಲಕವೇ ಮಾಳು ರವರು ಬಿಗ್ ಬಾಸ್ ಮನೆಯಲ್ಲಿ ಮುನ್ನಡೆಯುತ್ತಿದ್ದಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ.
