ಸುದ್ಧಿಕನ್ನಡ ವಾರ್ತೆ
ಗುಜರಾತ್: ಗುರುವಾರ ಜೂನ್ 12 ರಂದು ಮಧ್ಯಾನ್ಹ ಅಹಮಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ 171 ಅಪಘಾತದ ಸ್ಥಳದಲ್ಲಿ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯ (Bhagavad Gita)ಬಹುತೇಕ ಅಖಂಡದ ಪುಸ್ತಕ ಪತ್ತೆಯಾಗಿದೆ. ಇಷ್ಟು ದೊಡ್ಡ ಅವಘಡ ಮತ್ತು ಬೆಂಕಿ ಹತ್ತಿ ಉರಿದ ಸ್ಥಳದಲ್ಲಿ ಭಗವಧ್ಘೀತೆ ಸುರಕ್ಷಿತವಾಗಿರುವುದು ಅಚ್ಚರಿ ಮೂಡಿಸಿದೆ.

ವಿಮಾನ ಅಪ್ಪಳಿಸಿದಾಗ ಉಂಟಾದ ದೊಡ್ಡ ಪ್ರಮಾಣದ ಬೆಂಕಿಯ ಹೊರತಾಗಿಯೂ, ಈ ಪವಿತ್ರ ಪುಸ್ತಕಕ್ಕೆ ಯಾವುದೇ ಹಾನಿಯಾಗಿಲ್ಲ. ಇದು ಅಚ್ಚರಿಗೆ ಕಾರಣವಾಗಿದೆ.

ಅಹಮದಾಬಾದ್ ನಿಂದ ಲಂಡನ್ ನ ಗ್ಯಾಟ್ವಿಕ್ ಗೆ ತೆರಳುತ್ತಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನವು ಗುರುವಾರ ಮಧ್ಯಾಹ್ನ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ 242 ಜನರಲ್ಲಿ ಒಬ್ಬರು ಮಾತ್ರ ಬದುಕುಳಿದಿದ್ದರು. ಹೊಗೆಯಾಡುತ್ತಿರುವ ಭಗ್ನಾವಶೇಷ ಸ್ಥಳದಲ್ಲಿ ಪತ್ತೆಯಾದ ಪವಿತ್ರ ಹಿಂದೂ ಧರ್ಮಗ್ರಂಥದ ಪ್ರತಿಯನ್ನು ವಶಪಡಿಸಿಕೊಳ್ಳಲಾಗಿದೆ.

ಈ ಭಗವಧ್ಗೀತೆ ಪುಸ್ತಕವು ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕದ್ದೇ…? ಅಥವಾ ಹಾಸ್ಟೇಲ್ ನಲ್ಲಿದ್ದ ವಿದ್ಯಾರ್ಥಿಗಳದ್ದೇ..? ಎಂಬುದು ಪ್ರಶ್ನೆಯಾಗಿದ್ದರೂ ಕೂಡ, ಇಷ್ಟು ದೊಡ್ಡ ಅವಗಢದಲ್ಲಿ ಈ ಪವಿತ್ರ ಗೃಂಥ ಸುರಕ್ಷಿತವಾಗಿರುವುದು ಅಚ್ಚರಿ ಮೂಡಿಸಿದೆ.