ಸುದ್ಧಿಕನ್ನಡ ವಾರ್ತೆ
ಗುಜರಾತ್: ಅಹಮದಾಬಾದ್ ನಲ್ಲಿ ಗುರುವಾರ ಮಧ್ಯಾನ್ಹ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದ ಏಕೈಕ ಕೆನಡಾದ ಪ್ರಜೆ ನಿರಾಲಿ ಪಟೇಲ್ (Canadian citizen Nirali Patel) ರವರು ಭಾರತೀಯ ಮೂಲದ ದಂತವೈದ್ಯೆಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಅವರು ಟೊರೊಂಟೊದ ಎಟೊಬಿಕೋಕ್ ನಲ್ಲಿ ವಾಸಿಸುತ್ತಿದ್ದ 32 ವರ್ಷದ ನಿರಾಲಿ ಪಟೇಲ್ ಅವರು ಭಾರತದಲ್ಲಿನ ಸಾಮಾಜಿಕ ಪ್ರವಾಸ ಮುಗಿಸಿ ಕೆನಡಾಕ್ಕೆ ಹಿಂತಿರುಗುತ್ತಿದ್ದರು ಎನ್ನಲಾಗಿದೆ.
ಲಂಡನ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಗುರುವಾರ ಮಧ್ಯಾನ್ಹ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಅಹಮದಾಬಾದ್ ನ ಹಾಸ್ಟೇಲ್ ಪ್ರದೇಶದಲ್ಲಿ ಪತನಗೊಂಡು 241 ಪ್ರಯಾಣಿಕರು ಸಾವನ್ನಪ್ಪಿದರು. ವಿಮಾನದಲ್ಲಿ 12 ಸಿಬ್ಬಂದಿಗಳ ಜೊತೆಗೆ 169 ಭಾರತೀಯರು, 53 ಬ್ರಿಟಿಷರು, ಒಬ್ಬ ಕೆನಡಿಯನ್ ಮತ್ತು ಏಳು ಪೆÇೀರ್ಚುಗೀಸ್ ಪ್ರಜೆಗಳಿದ್ದರು. ಈ ದುರಂತದಲ್ಲಿ ಒಬ್ಬ ವ್ಯಕ್ತಿ ಪವಾಡಸದೃಶ್ಯವಾಗಿ ಬದುಕುಳಿದಿದ್ದಾರೆ.
ಕೆನಡಾದ ಮಿಸ್ಸಿಸೌಗಾ ದಂತ ಚಿಕಿತ್ಸಾಲಯದಲ್ಲಿ (Mississauga Dental Clinic of Canada) ಕೆಲಸ ಮಾಡಿದ ನಿರಾಲಿ ಪಟೇಲ್, 2016 ರಲ್ಲಿ ಭಾರತದಲ್ಲಿ ದಂತ ಪದವಿ ಪಡೆದಿದ್ದರು. ತದನಂತ 2019 ರಲ್ಲಿ ಕೆನಡಾದಲ್ಲಿ ಲೈಸೆನ್ಸ್ ಅನ್ನು ಪಡೆದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.